


ಬೆಳ್ತಂಗಡಿ: ಅಪಘಾತದಲ್ಲಿ ಗಾಯವಾಗಿ ಚಿಕಿತ್ಸೆ ಮತ್ತು ವಿಶ್ರಾಂತಿಯಲ್ಲಿರುವ ಕರ್ನಾಟಕ ಸೀರೋ ಮಲಬಾರ್ ಕ್ಯಾಥೊಲಿಕ್ ಅಸೋಸಿಯೇಷನ್ (ಕೆಎಸ್‌ಎಮ್‌ಸಿಎ) ಇದರ ಸಾರ್ವಜನಿಕ ಸಂಪರ್ಕಾಧಿಕಾರಿ ಪಿ.ಸಿ ಸೆಬಾಸ್ಟಿಯನ್ ಅವರನ್ನು ಮುಂಡಾಜೆಯ ಅವರ ನಿವಾಸದಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾದ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ ಅವರು ಬುಧವಾರ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.


ಈ ಸಂದರ್ಭದಲ್ಲಿ ಮುಂಡಾಜೆ ಸೈಂಟ್ ಮೇರಿಸ್ ಚರ್ಚ್‌ನ ಧರ್ಮಗುರು ಫಾ. ಶಿಬಿ ಥೋಮಸ್ ಪುದಿಯೆರ, ಹಿರಿಯ ಧರ್ಮಗುರು ಫಾ. ಜಾರ್ಜ್ ಕುರಿಯಕೋಸ್ ಉಪಸ್ಥಿತರಿದ್ದರು.









