ಧರ್ಮಸ್ಥಳ: ನದಿಯ ತೀರದಲ್ಲಿ ಅನಾಥ ಶವ ಆ.27ರಂದು ಪತ್ತೆಯಾಗಿದೆ.ಸ್ಥಳೀಯ ವ್ಯಕ್ತಿ ನದಿದಾಡುತ್ತಿರುವ ವೇಳೆಯಲ್ಲಿ ಶವ ಅಂಬ್ಯ ಗಂಡಿ ಎಂಬಲ್ಲಿ ನದಿಯ ದಡದಲ್ಲಿ ತೇಲುವುದು ಕಂಡುಬಂದಿದ್ದು ಇದನ್ನು ನೋಡಿದ ತಕ್ಷಣ ಶೌರ್ಯ ವಿಪತ್ತು ತಂಡದ ಸದಸ್ಯರಿಗೆ ಕರೆಯನ್ನು ಮಾಡಿ ವಿಚಾರವನ್ನು ತಿಳಿಸಿ ತಂಡ ತಕ್ಷಣ ಧರ್ಮಸ್ಥಳ ಪೊಲೀಸರಿಗೆ ಮಾಹಿತಿಯನ್ನು ನೀಡಿ ಧರ್ಮಸ್ಥಳ,ಬೆಳಾಲು, ಉಜಿರೆಯ ವಿಪತ್ತು ತಂಡದ ಸದಸ್ಯರು ಶವವನ್ನು ಮೇಲಕ್ಕೆ ಎತ್ತಿ ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ರವಾನಿಸಲಾಗಿದೆ.ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
p>