ಬೆಳ್ತಂಗಡಿ: ಹ್ಯಾಂಡ್ ಬಾಲ್ ಸ್ಪರ್ಧೆಯಲ್ಲಿ ಹೋಲಿ ರಿಡೀಮರ್ ಶಾಲೆ ಜಿಲ್ಲಾ ಮಟ್ಟಕ್ಕೆ ಆಯ್ಕೆ

0

ಬೆಳ್ತಂಗಡಿ: ಆಗಸ್ಟ್ 25ರಂದು ಸಂತ ತೆರೇಸಾ ಪ್ರೌಢಶಾಲೆ ಬೆಳ್ತಂಗಡಿಯಲ್ಲಿ ನಡೆದ ತಾಲೂಕು ಮಟ್ಟದ ಹ್ಯಾಂಡ್ ಬಾಲ್ ಸ್ಪರ್ಧೆಯಲ್ಲಿ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಬಹುಮಾನಗಳನ್ನು ಪಡೆದಿರುತ್ತಾರೆ.

ಪ್ರಾಥಮಿಕ ವಿಭಾಗದ ಬಾಲಕಿಯರು ಪ್ರಥಮ ಸ್ಥಾನ, ಬಾಲಕರು ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.

ಪ್ರೌಢಶಾಲಾ ವಿಭಾಗದ ಸ್ಪರ್ಧೆಯಲ್ಲಿ ಬಾಲಕಿಯರು ಪ್ರಥಮ ಸ್ಥಾನ ಹಾಗೂ ಬಾಲಕರು ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.

ಪ್ರೌಢಶಾಲಾ ವಿಭಾಗದಲ್ಲಿ ಉತ್ತಮ ಎಸೆತಗಾರರಾಗಿ ಕರಣ್ (9ನೇ) , ಜಾನಿಸ್ ವಿನೀಶಾ (10ನೇ), ಉತ್ತಮ ಗೋಲ್ ಕೀಪರ್ ಆಗಿ ದೀಪ್ತಿ (10ನೇ) ಹಾಗೂ ಪ್ರಾಥಮಿಕ ವಿಭಾಗದಲ್ಲಿ ಉತ್ತಮ ಎಸೆತಗಾರರಾಗಿ ಮನ್ವಿತ್ ಆರ್ (7ನೇ), ಸುಝಾನಾ (7ನೇ) ಮತ್ತು ಉತ್ತಮ ಗೋಲ್ ಕೀಪರ್ ಆಗಿ ಮಿನಾಲ್ ಜೋಸೆಫ್ (7ನೇ) ಸಾಧನೆಯನ್ನು ಮೆರೆದಿದ್ದಾರೆ.

ಪ್ರಥಮ ಸ್ಥಾನ ಪಡೆದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕಿಯರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ದೈಹಿಕ ಶಿಕ್ಷಣ ಶಿಕ್ಷಕ ಶರತ್ ಪಿಂಟೋರವರು ವಿದ್ಯಾರ್ಥಿಗಳನ್ನು ತರಬೇತು ಮಾಡಿರುತ್ತಾರೆ.ವಿದ್ಯಾರ್ಥಿಗಳ ಕ್ರೀಡಾ ಸಾಧನೆಗೆ ಶಾಲಾ ಮುಖ್ಯೋಪಾಧ್ಯಾಯ ವಂ ಫಾ. ಕ್ಲಿಫರ್ಡ್ ಪಿಂಟೋ ಅಭಿನಂದಿಸಿದರು.

LEAVE A REPLY

Please enter your comment!
Please enter your name here