ಅರಸಿನಮಕ್ಕಿ: ಇಲ್ಲಿಯ ರಾಜನ್ ಮತ್ತು ಸೌಮ್ಯ ದಂಪತಿಯ ಮಗಳಾದ ಸನುಷ ಇವರು ಇತ್ತೀಚೆಗೆ ಉಡುಪಿಯಲ್ಲಿ ಪದ್ಮಶಾಲಿ ನೇಕಾರರ ಪ್ರತಿಷ್ಠಾನ ಇದರ ಆಶ್ರಯದಲ್ಲಿ ನಡೆದ ಉಡುಪಿ ತಾಳಿಪಾಡಿ, ಶಿವಳ್ಳಿ, ಪಡು ಪಣಂಬೂರು, ಬ್ರಹ್ಮಾವರ, ಮಂಗಳೂರು,ಬಸ್ರೂರು, ಮಿಜಾರು ಪ್ರಾಥಮಿಕ ನೇಕಾರರ ಸೇವಾ ಸಂಘಗಳ ಜಂಟಿ ಸಹ ಭಾಗಿತ್ವದಲ್ಲಿ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಪ್ರಯುಕ್ತ ಕೈಮಗ್ಗ ಸೀರೆಗಳ ಉತ್ಸವ ಮತ್ತು ಸೀರೆಗಳ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಉಡುಪಿ ಸೀರೆ ಟೈಟಲ್ ವಿನ್ನರ್ ಸೌಂದರ್ಯ ರಾಣಿ ಪ್ರಶಸ್ತಿಗಳಿಸಿದ್ದಾರೆ.
ಇವರು ಇದಕ್ಕೂ ಮುಂಚೆ ಹಲವಾರು ಸಂಚಿಕೆಗಳಲ್ಲಿ ರೂಪದರ್ಶಿಯಾಗಿ ಭಾಗವಹಿಸಿರುವ ಅನುಭವಿಯಾಗಿದ್ದಾರೆ.
ಇವರು ಪ್ರಸ್ತುತ ಕೊಕ್ಕಡ ಸೈಂಟ್ ಫ್ರಾನ್ಸಿಸ್ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಪುತ್ತೂರು ಇಲ್ಲಿ ವಿದ್ವಾನ್ ದೀಪಕ್ ಕುಮಾರ್ ವಿದುಷಿ ಪ್ರೀತಿ ಕಲಾ ವಿದ್ವಾನ್ ಗಿರೀಶ್ ಕುಮಾರ್ ಇವರಲ್ಲಿ ಎಂಟು ವರ್ಷಗಳಿಂದ ಭರತನಾಟ್ಯವನ್ನು ಅಭ್ಯಾಸ ಮಾಡುತ್ತಿದ್ದು, ಈಗಾಗಲೇ ಹಲವಾರು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಮೆಚ್ಚುಗೆಗಳಿಸಿದ್ದಾರೆ.
ಸ್ನೇಹಜೀವಿ ಫೌಂಡೇಶನ್ ಮತ್ತು ಅಕ್ಷರದೀಪ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ನಡೆಸಿದ ಶಾಲಾಮಟ್ಟದ ಮಕ್ಕಳ ಭರತನಾಟ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಸ್ವರ್ಣ ಕಲಾ ರತ್ನ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಇವರು ಭರತನಾಟ್ಯ ಜೂನಿಯರ್ ಪರೀಕ್ಷೆಯನ್ನು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿರುತ್ತಾರೆ.