ಪ್ರಪಂಚದ ಎಲ್ಲಾ ವಂಶವಾಹಿಯನ್ನು ಒಳಗೊಂಡ ಭಾರತ ದೇಶದಲ್ಲಿ ಹುಟ್ಟಿದ್ದು ನಮ್ಮ ಪುಣ್ಯ : ಎಸ್.ಡಿ.ಎಂ ಕಾಲೇಜಿನ ಸದ್ಭಾವನಾ ದಿನಾಚರಣೆಯಲ್ಲಿ ಸುನೀಲ್ ಪಿ.ಜೆ

0

ಉಜಿರೆ: “ಎಲ್ಲರೂ ನಮ್ಮವರು ಎಂಬ ಭಾವ ನಮ್ಮಲ್ಲಿ ಬರಬೇಕು.ಯಾವಾಗ ಜನರ ಮಧ್ಯೆ ಜಾತಿ,ಧರ್ಮಗಳ ವಿಷಯಗಳಲ್ಲಿ ಭಿನ್ನಾಭಿಪ್ರಾಯ ಬೆಳೆಯುತ್ತದೆಯೋ,ಆಗ ಮೂರನೆಯವರು ನಮ್ಮನ್ನು ಅವರ ಉಪಯೋಗಕ್ಕಾಗಿ ಬಳಸಿಕೊಳುತ್ತಾರೆ. ಸದ್ಭಾವನಾ ದಿವಸ್ ರಾಜೀವ್ ಗಾಂಧಿಯವರ ಅಭಿವೃದ್ಧಿ ಹೊಂದಿದ ಭಾರತ ದೇಶದ ದೃಷ್ಟಿಕೋನವನ್ನು ಉತ್ತೇಜಿಸುತ್ತದೆ.ಅವರು ಕಿರಿಯ ವಯಸ್ಸಿನಲ್ಲೇ ಪ್ರಧಾನಿಯಾಗಿ ದೇಶದ ಆರ್ಥಿಕತೆಯಲ್ಲಿ ಬದಲಾವಣೆ ತಂದವರು” ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಜೀವಶಾಸ್ತ್ರ ಪ್ರಾಧ್ಯಾಪಕರೂ ಹಾಗೂ ಚಿಂತಕರಾದ ಸುನಿಲ್ ಪಿ.ಜೆ ಹೇಳಿದರು.

ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರಿಗೆ ಗೌರವ ಸೂಚಕವಾಗಿ ಹಾಗೂ ಜನ್ಮವಾರ್ಷಿಕೋತ್ಸವದ ಸ್ಮರಣಾರ್ಥವಾಗಿ, ಭಾರತವು ಪ್ರತಿವರ್ಷ ಆಗಸ್ಟ್ 20ರಂದು ಸದ್ಭಾವನಾ ದಿವಸ್ ಅನ್ನು ಆಚರಿಸುತ್ತದೆ.ಇದರ ಅಂಗವಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜು (ಸ್ವಾಯತ್ತ) ಉಜಿರೆಯಲ್ಲಿ ಆ.18ರಂದು ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಸದ್ಭಾವನಾ ದಿವಸವನ್ನು ಆಚರಿಸಲಾಯಿತು.

ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಸುನಿಲ್ ಪಿ.ಜೆ ಅವರು ಮಾತನಾಡಿ, “ವಿವಿಧ ಮತ,ಪಂಥಗಳು ನಮ್ಮ ಜೀವನ ಕ್ರಮವನ್ನು ಸುಧಾರಿಸಲು ಮಾತ್ರ. ನಾವು ನಡೆಯುವುದೊಂದೇ ಭೂಮಿ ಕುಡಿಯುವುದೊಂದೇ ನೀರು. ಸಾವು ಬದುಕಿನ ನಡುವೆ ಹೋರಾಡುವಾಗ ಯಾರೂ ಯಾವುದೇ ಜಾತಿ ನೋಡಿ ರಕ್ತದಾನ ಮಾಡುವುದಿಲ್ಲ.ನಾವು ನಮ್ಮ ಮಿತಿಗಳನ್ನು ಮೀರಿ ಮಾನವರಾಗಿ ಬದುಕಬೇಕು.ಪ್ರಪಂಚದ ಎಲ್ಲಾ ವಂಶವಾಹಿಯನ್ನು ಒಳಗೊಂಡ ಭಾರತ ದೇಶದಲ್ಲಿ ಹುಟ್ಟಿದ್ದು ನಮ್ಮ ಪುಣ್ಯ. ನಾವು ದೇಶಪ್ರೇಮದ ಜೊತೆ ವಿಶ್ವ ಪ್ರೇಮವನ್ನು ಹೊಂದಬೇಕು,ಆಗ ಮಾತ್ರ ಸದ್ಭಾವನಾ ದಿನಾಚರಣೆಗೆ ಒಂದು ಅರ್ಥ”ಎಂದು ಹೇಳಿದರು.

ಎಸ್.ಡಿ.ಎಂ ಕಾಲೇಜು,ಉಜಿರೆಯ ಪ್ರಾಂಶುಪಾಲರಾದ ಡಾ.ಬಿ.ಎ ಕುಮಾರ್ ಹೆಗ್ಡೆ,ಅಧ್ಯಕ್ಷೀಯ ನುಡಿಗಳನ್ನಾಡುತ್ತಾ, “ಮಾಜಿ ಪ್ರಧಾನಿ ರಾಜೀವ್ ಗಾಂಧಿ ವಿಭಿನ್ನ ವ್ಯಕ್ತಿತ್ವ,ನಗುಮುಖ, ಜನ ಸಾಮಾನ್ಯರೊಂದಿಗೆ ಅವರು ಬೆರೆಯುತ್ತಿದ್ದ ರೀತಿ, ಅವರನ್ನು ಮೇರು ರಾಜಕಾರಣಿಯನ್ನಾಗಿಸಿತ್ತು. ಸದ್ಭಾವ ಎನ್ನುವುದು ಪ್ರಸ್ತುತ ವಿದ್ಯಮಾನಕ್ಕೆ ಹೆಚ್ಚು ಅವಶ್ಯಕವಿದೆ. ನಮ್ಮ ಚಾರಿತ್ರ್ಯದಿಂದ ನಮ್ಮ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಹೊರತು ನಮ್ಮ ಜಾತಿ, ಧರ್ಮದಿಂದ ಅಲ್ಲ. “ತಿರುಗಿ ಬಂದವರಿಲ್ಲ, ವರದಿ ತಂದವರಿಲ್ಲ” ಅನ್ನುವ ಹಾಗೆ ನಾವೆಲ್ಲರೂ ಮಾನವರು,ಇರುವಷ್ಟು ದಿನ ಸದ್ಭಾವದಿಂದ ಬದುಕೋಣ” ಎಂದರು. ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ ಡಾ.ಮಹೇಶ್ ಕುಮಾರ್ ಶೆಟ್ಟಿ ಹೆಚ್ ಸ್ವಾಗತಿಸಿದರು.

ಸ್ವಯಂಸೇವಕಿ ವಾಣಿ ಸಂಪನ್ಮೂಲ ವ್ಯಕ್ತಿಗಳನ್ನು ಪರಿಯಿಸಿದರು, ಸ್ವಯಂಸೇವಕ ಸುಬ್ರಮಣ್ಯ ವಂದಿಸಿದರು.ಕಾರ್ಯಕ್ರಮದಲ್ಲಿ ಸಹಯೋಜನಾಧಿಕಾರಿ ಪ್ರೊ.ದೀಪಾ ಆರ್.ಪಿ, ಹಿರಿಯ ಹಾಗೂ ಕಿರಿಯ ಸ್ವಯಂಸೇವಕರು ಉಪಸ್ಥಿತರಿದ್ದರು.ಸ್ವಯಂಸೇವಕಿ ಸಿಂಚನ ನಿರೂಪಿಸಿದರು.

LEAVE A REPLY

Please enter your comment!
Please enter your name here