ಅಕ್ರಮವಾಗಿ ಮಾದಕವಸ್ತು M.D.M.A ಯನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಬೆಳ್ತಂಗಡಿ ಮೂಲದ ಅಂಝದ್- ಪುತ್ತೂರು ಪೊಲೀಸರ ವಶಕ್ಕೆ

0

ಬೆಳ್ತಂಗಡಿ : ಪುತ್ತೂರಿನ ಮುರ ಜಂಕ್ಷನ್ ನ ಬಸ್ಸು ನಿಲ್ದಾಣದ ಬಳಿ ಅಕ್ರಮವಾಗಿ ಮಾದಕವಸ್ತು M.D.M.A ಯನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮ, ಬೆಳ್ತಂಗಡಿ ನಿವಾಸಿಯಾದ ಅಂಝದ್ ಯಂ.ಯಂ (27ವ) ಎಂಬಾತನನ್ನು ಪುತ್ತೂರು ನಗರ ಪೊಲೀಸರು ವಶಪಡಿಸಿಕೊಂಡ ಘಟನೆ ಆ.18 ರಂದು ನಡೆದಿದೆ.

ಘಟನೆಯ ವಿವರ: ಪುತ್ತೂರಿನ ಮುರ ಜಂಕ್ಷನ್ ನ ಬಸ್ಸು ನಿಲ್ದಾಣದ ಬಳಿ ಅಕ್ರಮವಾಗಿ ಮಾದಕವಸ್ತು M.D.M.A ಯನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ನಿವಾಸಿಯಾದ ಅಂಝದ್ ಯಂ ಯಂ (27ವ) ಎಂಬಾತನನ್ನು ಪುತ್ತೂರು ನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಅಂದಾಜು 15,000/- ಬೆಲೆಯ 2.86 ಗ್ರಾಂ M.D.M.A, ನಗದು 920ರೂ ಹಾಗೂ ಅಂದಾಜು ರೂ 3,000/- ಬೆಲೆಯ ಮೊಬೈಲ್ ನ್ನು ವಶಕ್ಕೆ ಪಡೆದು, ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

LEAVE A REPLY

Please enter your comment!
Please enter your name here