ಸೌಜನ್ಯ ಪ್ರಕರಣ-ನೈಜ ಆರೋಪಿಗಳಿಗೆ ಶಿಕ್ಷೆಯಾಗುವಂತೆ, ಧರ್ಮಸ್ಥಳದ ಬಗ್ಗೆ ಅವಹೇಳನ ಮಾಡದಂತೆ ಬೂಡುಮುಗೇರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪ್ರಾರ್ಥನೆ

0

ಅರಸಿನಮಕ್ಕಿ: ವಲಯದ ಬೂಡುಮುಗೇರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸೌಜನ್ಯಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ ನೈಜ ಆರೋಪಿಗಳಿಗೆ ಶಿಕ್ಷೆ ಆಗಬೇಕು ಮತ್ತು ಹಿಂದುಗಳ ಧಾರ್ಮಿಕ ಶ್ರದ್ಧಾ ಕೇಂದ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹಾಗೂ ಪರಮ ಪೂಜ್ಯ ಖಾವಂದರ ಬಗ್ಗೆ ಅವಹೇಳನ ಮಾಡದಂತೆ ಅವರಿಗೆ ಒಳ್ಳೆಯ ಬುದ್ದಿ ಮತ್ತು ಮನಸ್ಸನ್ನು ಆ ದೇವರು ಕರುಣಿಸಲಿ ಎಂದು ಪೂಜೆ ಮಾಡಿ ಪ್ರಾರ್ಥನೆ ಮಾಡಲಾಯಿತು.

ಪ್ರಾರ್ಥನೆಯಲ್ಲಿ ದೇವಸ್ಥಾನದ ಅರ್ಚಕರು, ಆಡಳಿತ ಮುಖ್ಯಸ್ಥರಾದ ರಾಜಗೋಪಾಲ್, ಸಿ ಎ ಬ್ಯಾಂಕ್ ನಿರ್ದೇಶಕರು ಮತ್ತು ಉದ್ಯಮಿ ಅದ ಧರ್ಮರಾಜ್ ಅಡ್ಕಾಡಿ, ಸಿ ಎ ಬ್ಯಾಂಕ್ ಉಪಾದ್ಯಕ್ಷರು ರಾಜು ಕೆ ಸಾಲಿಯಾನ್, ಕಾಪು ಉಪ್ಪರಡ್ಕ ದೈವಸ್ಥಾನದ ಅಧ್ಯಕ್ಷರು ಗಂಗಾಧರ ಕೆ, ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯರು ಚೆನ್ನಪ್ಪ ಗೌಡ, ಹಾಗೂ ಮಂಜುಳ ಕಾರಂತ್, ಅರಿಕೆಗುಡ್ಡೆ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರು ಮುರಳಿ ಶೆಟ್ಟಿಗಾರ್,ಮತ್ತು ಕಾರ್ಯದರ್ಶಿ ಜಯಪ್ರಸಾದ್ ಶೆಟ್ಟಿಗಾರ್, ಅರಿಸಿನಮಕ್ಕಿ ವಲಯದ ಮೇಲ್ವಿಚಾರಕರಾದ ಶಶಿಕಲಾ, ಎರಡು ಒಕ್ಕೂಟದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here