


ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಹಾಗೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಸವಣಾಲು ಗುರುವಾಯನಕೆರೆ ಹಾಗೂ ಪುಂಜಾಲಕಟ್ಟೆ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟವು ಆ.17ರಂದು ನಡೆಯಿತು.

ಈ ಪಂದ್ಯಾಟವು ಕೊನೆಯ ಘಳಿಗೆಯಲ್ಲಿ ರಣರೋಚಕ ಮಟ್ಟಕ್ಕೆ ತಲುಪಿ ಮನ್ ಶರ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳ ಕ್ರಿಯಾಶೀಲ ಆಟದಿಂದ ದ್ವಿತೀಯ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಈ ನಿರೀಕ್ಷಿತ ಪಂದ್ಯಾಟದ ತಿರುವನ್ನೇ ಬದಲಿಸಿದ ಮನ್ ಶರ್ ವಿದ್ಯಾಸಂಸ್ಥೆಯ ಮಹಮ್ಮದ್ ಸುಹೈಲ್ (6ನೇ) ಬೆಸ್ಟ್ ರಿಸಿವೆರ್ ಪ್ರಶಸ್ತಿಯನ್ನೂ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
