

ಬೆಳ್ತಂಗಡಿ: ಆಗಸ್ಟ್ 17ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಯ್ಯೂರಿನಲ್ಲಿ ನಡೆದ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಹೋಲಿ ರಿಡೀಮರ್ ಶಾಲೆ ಹಲವು ಬಹುಮಾನಗಳನ್ನು ಪಡೆದುಕೊಂಡಿದೆ.

ಲಘು ಸಂಗೀತ ಸೃಷ್ಟಿ (6ನೇ) ಪ್ರಥಮ ಸ್ಥಾನ, ಇಂಗ್ಲೀಷ್ ಕಂಠ ಪಾಠ ಸೋನಿಯಾ ಬೆನ್ನಿಸ್(7ನೇ) ಪ್ರಥಮ ಸ್ಥಾನ, ಇಂಗ್ಲೀಷ್ ಕಂಠಪಾಠ ರೀವನ್ ಸಿಕ್ವೇರಾ (4ನೇ) ಪ್ರಥಮ ಸ್ಥಾನ, ಮಿಮಿಕ್ರಿ ಭುವಿ (7ನೇ) ದ್ವಿತೀಯ ಸ್ಥಾನ, ಕಥೆ ಹೇಳುವುದು ಲಹರಿ (7ನೇ) ದ್ವಿತೀಯ ಸ್ಥಾನ, ಭಕ್ತಿಗೀತೆ ಕೃತಿಕಾ ಪೈ (6ನೇ) ದ್ವಿತೀಯ ಸ್ಥಾನ, ಅರೇಬಿಕ್ ಪಠಣ ಮಹಮ್ಮದ್ ಶ್ವೈಫ್ (7ನೇ) ದ್ವಿತೀಯ ಸ್ಥಾನ, ಛದ್ಮವೇಷ ಭವಿಷ್ ಶೆಟ್ಟಿ (4ನೇ) ದ್ವಿತೀಯ ಸ್ಥಾನ, ಆಶುಭಾಷಣ ಮಾನ್ವಿ ಶ್ರೀಯಾನ್ (4ನೇ) ದ್ವಿತೀಯ ಸ್ಥಾನ, ಹಾಗೂ ಅಭಿನಯ ಗೀತೆ ಸೃಷ್ಟಿ (6ನೇ) ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ಶಾಲಾ ಮುಖ್ಯೋಪಾಧ್ಯಾಯರಾದ ವಂ ಫಾ ಕ್ಲಿಫರ್ಡ್ ಪಿಂಟೋರವರು ಅಭಿನಂದಿಸಿದರು.