ಉಜಿರೆ: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯ 2022-23 ನೇ ಸಾಲಿನ ವಿದ್ಯಾರ್ಥಿನಿಯರಿಗೆ ಜುಲೈ ತಿಂಗಳಿನಲ್ಲಿ ನಡೆದ ಅಖಿಲ ಭಾರತ ವೃತ್ತಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ.
ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟೆಂಟ್ ವೃತ್ತಿಯಲ್ಲಿ ದಾಖಲಾತಿ ಪಡೆದುಕೊಂಡ 19 ವಿದ್ಯಾರ್ಥಿನಿಯರು ಹಾಗೂ ಸೀವೀಂಗ್ ಟೆಕ್ನಾಲಜಿ ವೃತ್ತಿಯಲ್ಲಿ ದಾಖಲಾತಿ ಪಡೆದುಕೊಂಡ 18 ವಿದ್ಯಾರ್ಥಿನಿಯರು ಎಲ್ಲರೂ ತೇರ್ಗಡೆ ಹೊಂದಿದ್ದು ಶೇ.ನೂರು ಫಲಿತಾಂಶ ಲಭಿಸಿದೆ.ಈ ಪೈಕಿ ಸೀವೀಂಗ್ ಟೆಕ್ನಾಲಜಿ ವೃತ್ತಿಯ ಅಫ್ರೀನ್ ತಾಜ್ 91% ಹಾಗೂ ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟೆಂಟ್ ವೃತ್ತಿಯ ಸಮೀಕ್ಷಾ ರೈ 87% ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ.
ಒಟ್ಟು ವಿದ್ಯಾರ್ಥಿಗಳಲ್ಲಿ 19 ವಿದ್ಯಾರ್ಥಿನಿಯರು ಡಿಸ್ಟಿಂಕ್ಷನ್ ಹಾಗೂ 18 ವಿದ್ಯಾರ್ಥಿನಿಯರು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ.
ಸಂಸ್ಥೆಯ ಫಲಿತಾಂಶ ಕುರಿತು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಸಂಸ್ಥೆಯ ಪ್ರಾಂಶುಪಾಲ ವಿ.ಪ್ರಕಾಶ್ ಕಾಮತ್ ತಿಳಿಸಿದ್ದಾರೆ