ಅಂಡಿಂಜೆ: ಇಲ್ಲಿಯ ಪಾಂಡೀಲು ನಿವಾಸಿ ರಾಘವ ಪುತ್ರನ್ (63ವ) ರವರು ಅಸೌಖ್ಯದಿಂದ ಆ.14ರಂದು ನಿಧನರಾದರು.
ಮೂಲತಃ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರೀಯ ಸದಸ್ಯ, ಅಂಡಿಂಜೆ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ, ವೇಣೂರು ಕೃಷಿಪತ್ತಿನ ಸಹಕಾರಿ ಸಂಘದ ಮಾಜಿ ನಿರ್ದೇಶಕ, ಟೈಲರ್ ಎಸೋಸಿಯೇಶನ್ ಬೆಳ್ತಂಗಡಿ ತಾಲೂಕಿನ ಮಾಜಿ ಅಧ್ಯಕ್ಷ, ಅಂಡಿಂಜೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಮಾಜಿ ಅಧ್ಯಕ್ಷ, ಅಲ್ಲದೆ ಧಾರ್ಮಿಕ ಸಾಮಾಜಿಕ ಸಂಘಟನೆಗಳಲ್ಲಿ ಸಕ್ರೀಯ ಜವಾಬ್ದಾರಿಗಳನ್ನು ನಿರ್ವಹಿಸಿ ಜನರ ಪ್ರೀತಿ ಪಾತ್ರರಾಗಿದ್ದರು.
ಹಲವಾರು ವರ್ಷ ಸುದ್ದಿ ಬಿಡುಗಡೆ ಪತ್ರಿಕಾ ವಿತರಕರಾಗಿದ್ದರು.
ಮೃತರು ತಾಯಿ ಪದ್ಮ, ಪತ್ನಿ ಆಶಾಕಾರ್ಯಕರ್ತೆ ಸುಜಾತಾ, ಮಕ್ಕಳಾದ ಶಿವಕಿರಣ್, ಪ್ರತಾಪ್, ಐಶ್ವರ್ಯಾ, ನಿಧಿ, ಅಣ್ಣ ತಮ್ಮಂದಿರು, ಅಕ್ಕತಂಗಿಯರಲ್ಲದೆ ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ.
p>