ದ.ಕ.ಜಿಲ್ಲಾಡಳಿತದ ವತಿಯಿಂದ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರು 77 ನೇ ಸ್ವಾತಂತ್ರೋತ್ಸವದ ದೃಜಾರೋಹಣ ನೆರವೇರಿಸಿ ಸಂದೇಶ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ವೈದ್ಯಕೀಯ ದಿನಾಚರಣೆಯ ದಿನದಂದು ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯುತ್ತಮ ಸಾದನೆಗೈದ ವೆನ್ಲಾಕ್ ಆಸ್ಪತ್ರೆಯ ಖ್ಯಾತ ಮೂತ್ರ ರೋಗ ತಜ್ಞರಾದ ಬೆಳ್ತಂಗಡಿ ಮೂಲದ
ಡಾ.ಸದಾನಂದ ಪೂಜಾರಿ ಹಾಗೂ ಪುತ್ತೂರು ಸರಕಾರಿ ಆಸ್ಪತ್ರೆಯ ಮೂಳೆ ತಜ್ಞರಾದ ಅಜಯ್ ಎಮ್.ಬಿ.ರವರಿಗೆ ಇತ್ತೀಚೆಗೆ ಬೆಂಗಳೂರಿನ ವಿದಾನ ಸೌದದ ಬ್ಯಾಂಕ್ವೆಟ್ ಹಾಲ್ ಕೊಡಮಾಡಿದ ಬಿ.ಸಿ.ರಾಯ್ ಪ್ರಶಸ್ತಿ ಪುರಸ್ಕೃತರಾದ ಇವರಿಗೆ ಸ್ವಾತಂತ್ರ್ಯ ದಿನದಂದು ಮಂಗಳೂರಿನಲ್ಲಿ ಉಸ್ತುವಾರಿ ಸಚಿವರು ಗೌರವಿಸಿ ಅಭಿನಂಧಿಸಿದರು.
ವಿದಾನ ಪರಿಷತ್ ನ ಶಾಸಕರಾದ ಕೆ.ಹರೀಶ್ ಕುಮಾರ್, ಜಿಲ್ಲಾಧಿಕಾರಿಗಳು, ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ.ಕೆ.ಎ. ಹಿದಾಯತ್ತುಲ್ಲ, ಅಪರ ಜಿಲ್ಲಾಧಿಕಾರಿಗಳು, ಮಂಗಳೂರು ಪೋಲಿಸ್ ಕಮಿಷನರ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳು ಸಹಾಯಕ ಕಮೀಷನರ್, ಹಾಗೂ ಇಲಾಖಾಧಿಕಾರಿಗಳು ಹಾಜರಿದ್ದರು.