ಕುತ್ಲೂರು: ಇಲ್ಲಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿರುವ ಕುರಿಯಾಡಿ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಸಮಿತಿ, ಸ್ತ್ರೀಶಕ್ತಿ ಸ್ವಸಹಾಯ ಸಂಘ ಹಾಗೂ ಮಲೆಕುಡಿಯ ಸಂಘ ಗ್ರಾಮ ಸಮಿತಿ ಕುತ್ಲೂರು ನೇತೃತ್ವದಲ್ಲಿ 77ನೇ ಸ್ವಾತಂತ್ರ್ಯ ದಿನವನ್ನು ಆಚರಣೆ ಮಾಡಲಾಯಿತು.
ನಾರಾವಿ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಸಂತೋಷ್ ಕಾಂತಬೆಟ್ಟು ಧ್ವಜಾರೋಹಣ ನೆರವೇರಿಸಿದರು.
ಅಂಗನವಾಡಿ ಸಮಿತಿಯ ಅಧ್ಯಕ್ಷ ವಿಶ್ವನಾಥ ಪೆರಿಂಚ, ಅಂಗನವಾಡಿ ಸಹಾಯಕಿ ಲೋಕೇಶ್ವರಿ, ಮಲೆಕುಡಿಯ ಸಂಘ ಗ್ರಾಮ ಸಮಿತಿ ಕುತ್ಲೂರಿನ ಉಪಾಧ್ಯಕ್ಷ ಸುರೇಶ ಕೋಟ್ಯಂದಡ್ಕ, ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಅಧ್ಯಕ್ಷೆ ಶಶಿಕಲಾ, ಮುಖಂಡರಾದ ಚೀಂಕ್ರ ಮಲೆಕುಡಿಯ, ಶೇಖರ ಮಲೆಕುಡಿಯ, ಶ್ರೀಧರ ಪೆರಿಂಚ, ಸದಾಶಿವ ಅಂಜರೊಟ್ಟು, ಹೊನ್ನಮ್ಮ, ವಾರಿಜಾ, ಬೇಬಿ ಮಲೆಜ್ಜಂಡ, ಹುಕ್ರ ಮಲೆಕುಡಿಯ ಬರೆಂಗಾಡಿ, ಹೊನ್ನಯ್ಯ ಏರ್ದಡಿ, ರವಿ ಏರ್ದಡಿ, ಉದಯ ಬರೆಂಗಾಡಿ, ರಂಜಿತ್ ಅಳಂಬ, ವಸಂತ ಪಂಜಾಲು, ಜಯ ಒಂಜರ್ದಡಿ, ಕೃಷ್ಣಪ್ಪ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಪೂವಪ್ಪ ಅಂಜರೊಟ್ಟು ಸ್ವಾಗತಿಸಿದರು. ಹರೀಶ ಪಂಜಾಲು ಧನ್ಯವಾದ ಸಲ್ಲಿಸಿದರು. ಸುಧಾಕರ ಮಲೆಕುಡಿಯ ಕೋಟ್ಯಂದಡ್ಕ ಇವರು ಕಾರ್ಯಕ್ರಮ ನಿರೂಪಿಸಿದರು.
ಕಲೀಂ ಕುತ್ಲೂರು ಅಂಗನವಾಡಿಗೆ ಅಡುಗೆ ಪರಿಕರ ವಿತರಿಸಿದರು.