ಪೆರಾಡಿ ಮಸೀದಿಯಲ್ಲಿ ವಿಜೃಂಭಣೆಯ ಸ್ವಾತಂತ್ರ್ಯ ದಿನಾಚರಣೆ- ಭಾರತದ ಸ್ವಾತಂತ್ರ್ಯವು ಏಕತೆಯ ಉನ್ನತ ಸಂದೇಶವನ್ನು ಸಾರುತ್ತದೆ: ಸಪ್ವಾನ್ ಬಾಖವಿ ಮಾಪಾಲ್

0

ಪೆರಾಡಿ: ಭಾರತದ ಸಮಗ್ರತೆಮ ಭಾವೈಕ್ಯತೆಯನ್ನು ಸ್ವಾತಂತ್ರ್ಯ ಆಚರಣೆಯ ಮೂಲಕ ಕಂಡುಕೊಂಡ ಭಾರತೀಯರಿಗೆ ಸ್ವಾತಂತ್ರ್ಯ ದಿನವೆಂಬುವುದು ಪರಮ ಪವಿತ್ರ.ನಮ್ಮ ಪೂರ್ವಿಕರ ರಾಷ್ಟ್ರೀಯ ಏಕತಾಭಾವ ಮತ್ತು ತ್ಯಾಗೋಜ್ವಲ ಹೋರಾಟದ ಫಲವಾಗಿದೆ ಸ್ವಾತಂತ್ರ್ಯ ದಿನಾಚರಣೆ.ಇದರಲ್ಲಿ ಮುಸಲ್ಮಾನರ ಕೊಡುಗೆ ಅವರ್ಣನೀಯ. ಮುಸ್ಲಿಂ ಸಮುದಾಯ ಇತಿಹಾಸವನ್ನು ಮುಖ್ಯವಾಹಿನಿಯಿಂದ ಪ್ರತ್ಯೇಕಿಸಿ, ಮರೆಮಾಚಲು ಪ್ರಯತ್ನಿಸುತ್ತಿರುವ ಕೆಲ ವ್ಯವಸ್ಥಿತ ಕುತಂತ್ರ ಖಂಡನೀಯ.ಇದರ ಬಗ್ಗೆ ನಾವು ಜಾಗರೂಕತೆ ವಹಿಸಬೇಕು ಎಂದು ಪೆರಾಡಿ ಜುಮಾ ಮಸೀದಿ ಖತೀಬರಾದ ಬಹು.ಸಪ್ವಾನ್ ಬಾಖವಿ ಮಾಪಾಲ್ ಪೆರಾಡಿ ಮಸೀದಿ ವಠಾರದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸಂದೇಶ ಬಾಷಣ ನಡೆಸಿದರು.

ಖುವ್ವತುಲ್ ಇಸ್ಲಾಂ ಮದ್ರಸ ಪೆರಾಡಿ ಇದರ ವತಿಯಿಂದ ಸ್ವಾತಂತ್ರ್ಯೋತ್ಸವ ದಿನಾಚರಣೆವು ಬೆಳಿಗ್ಗೆ 7.00 ಕ್ಕೆ ಸರಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಬದ್ರಿಯಾ ಜುಮಾ ಮಸೀದಿ ಪೆರಾಡಿ ಇದರ ಅಧ್ಯಕ್ಷರಾದ ಜ.ಅಬ್ದುಲ್ ಸಲಾಂ ಮರೋಡಿ ಧ್ವಜಾರೋಹಣ ನೆರವೇರಿಸಿ “ಸ್ವಾತಂತ್ರ್ಯ ದಿನಾಚರಣೆಯು ನಮ್ಮೆಲ್ಲರ ಕರ್ತವ್ಯ. ಇದಕ್ಕಾಗಿ ಶ್ರಮಿಸುವುದು, ಧ್ವನಿ ಎತ್ತುವುದು ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿಯಾಗಿದೆ. ಯುವ ಸಮೂಹ ಇದರ ಬಗ್ಗೆ ಇನ್ನಷ್ಟು ಕಾಳಜಿ ವಹಿಸಿ ಮುಂದಿನ ಪೀಳಿಗೆಗೆ ಮಾದರಿಯಾಗಬೇಕು” ಎಂದು ಅಧ್ಯಕ್ಷೀಯ ಭಾಷಣ ನಡೆಸಿದರು.

ಮದ್ರಸ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಗೂ ದೇಶಭಕ್ತಿ ಗೀತೆ ಆಲಾಪನೆ ಮಾಡಿದರು.SKSBV ಖವ್ವತುಲ್ ಇಸ್ಲಾಂ ಮದ್ರಸ ಪೆರಾಡಿ ಅಧ್ಯಕ್ಷ ಮುಹಮ್ಮದ್ ಅನಸ್ ಪ್ರತಿಜ್ಞಾವಿಧಿ ಬೋಧಿಸಿದರು. ಮದ್ರಸ ಅಧ್ಯಾಪಕರಾದ ಬಹು. ಹಸೈನಾರ್ ಮುಸ್ಲಿಯಾರ್ ಕಲ್ಲಗುಡ್ಡೆ ಶುಭಹಾರೈಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಮದ್ರಸ ವಿದ್ಯಾರ್ಥಿಗಳಿಗೆ ನಡೆಸಿದ ವಿವಿಧ ಸ್ಪರ್ಧೆಗಳ ಫಲಿತಾಂಶವನ್ನು ಘೋಷಿಸಿ ಬಹುಮಾನ ವಿತರಣೆ ನಡೆಸಲಾಯಿತು. ಜಮಾಅತ್ ಸಮಿತಿ ಕಾರ್ಯದರ್ಶಿಗಳಾದ ಮುಹಮ್ಮದ್ ಶರೀಫ್ ದುಗನೊಟ್ಟು, ಹಮೀದ್ ನೆಲ್ಲಿಗುಡ್ಡೆ ಸೇರಿದಂತೆ ಜಮಾಅತ್ ಪದಾಧಿಕಾರಿಗಳು, ಸ್ವಲಾತ್ ಕಮಿಟಿ, SKSBV ಸಮಿತಿಯ ಸದಸ್ಯರು, ಊರಿನ ಯುವಕರು ಸೇರಿದಂತೆ ಮದ್ರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here