ಬೆಳ್ತಂಗಡಿ-ಬಂಗಾಡಿ ವಲಯ ವಾಲಿಬಾಲ್ ಪಂದ್ಯಾಟ- ಮರಿಯಾಂಬಿಕ ಬೆದ್ರಬೆಟ್ಟು ಬಾಲಕಿಯರ ವಿಭಾಗ ಪ್ರಥಮ, ಬಾಲಕರ ವಿಭಾಗ ದ್ವಿತೀಯ

0

ಬೆದ್ರಬೆಟ್ಟು: ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೆಳ್ತಂಗಡಿ ಇದರ ಸಹಯೋಗದೊಂದಿಗೆ ಬೆಳ್ತಂಗಡಿ ಬಂಗಾಡಿ ವಲಯ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಬಾಲಕ / ಬಾಲಕಿಯರ ವಾಲಿಬಾಲ್ ಪಂದ್ಯಾಟವು ಬೆದ್ರಬೆಟ್ಟುವಿನ ಮರಿಯಾಂಬಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು.

ಬಾಲಕರ ವಿಭಾಗದಲ್ಲಿ ವಾಣಿ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ ಪ್ರಥಮ ಸ್ಥಾನವನ್ನು, ಮರಿಯಾಂಬಿಕ ಬೆದ್ರಬೆಟ್ಟು ದ್ವಿತೀಯ ಸ್ಥಾನವನ್ನು ಗಳಿಸದೆ.ಬಾಲಕಿಯರ ವಿಭಾಗದಲ್ಲಿ ಮರಿಯಾಂಬಿಕ ಆಂಗ್ಲ ಮಾಧ್ಯಮ ಶಾಲೆ ಬೆದ್ರಬೆಟ್ಟು ಪ್ರಥಮ ಸ್ಥಾನವನ್ನು, ಬಾಲಕಿಯರ ವಿಭಾಗ ದ್ವಿತೀಯ ಸ್ಥಾನವನ್ನು ಸೈoಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ ಪಡೆದುಕೊಂಡಿದೆ.

ಉತ್ತಮ ಹೊಡೆತಗಾರ ಬಾಲಕರ ವಿಭಾಗ: ಶ್ರೇಯಸ್ ಎಸ್, ವಾಣಿ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ

ಬೆಸ್ಟ್ ಸೆಟ್ಟರ್ ಬಾಲಕರ ವಿಭಾಗ: ಪ್ರತುಲ್ ಕೆ.ಎಸ್, ವಾಣಿ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ

ಆಲ್ ರೌಂಡರ್ ಬಾಲಕರ ವಿಭಾಗ: ಮೊಹಮ್ಮದ್ ಮುಝಮ್ಮಿಲ್, ಮರಿಯಾಂಬಿಕ ಆಂಗ್ಲ ಮಾಧ್ಯಮ ಶಾಲೆ ಬೆದ್ರಬೆಟ್ಟು

ಉತ್ತಮ ಹೊಡೆತಗಾರ ಬಾಲಕಿಯರ ವಿಭಾಗ: ತೃಷ, ಮರಿಯಾಂಬಿಕ ಆಂಗ್ಲ ಮಾಧ್ಯಮ ಶಾಲೆ ಬೆದ್ರಬೆಟ್ಟು

ಬೆಸ್ಟ್ ಸೆಟ್ಟರ್ ಬಾಲಕಿಯರ ವಿಭಾಗ: ಧ್ರುವಿ ಎಸ್, ಸೈoಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ

ಆಲ್ ರೌಂಡರ್ ಬಾಲಕಿಯರ ವಿಭಾಗ: ಸಾನ್ವಿ, ಮರಿಯಾಂಬಿಕ ಆಂಗ್ಲ ಮಾಧ್ಯಮ ಶಾಲೆ ಬೆದ್ರಬೆಟ್ಟು ಪಡೆದುಕೊಂಡಿದೆ.

ಶಾಲೆಯ ಸಂಚಾಲಕರಾದ ವಂದನೀಯ ಫಾ.ಸೆಬಾಸ್ಟಿನ್ ಸಿ.ಕೆ, ಮುಖ್ಯ ಶಿಕ್ಷಕಿ ವಂದನೀಯ ಸಿ.ಶೆರಿನ್ ಅಭಿನಂದಿಸಿದ್ದಾರೆ.ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಕಿಶನ್ ರಾಜ್ ರೈ ಎಲ್ಲಾ ಕ್ರೀಡಾಳು ಗಳನ್ನು ಅಭಿನಂದಿಸಿದರು.

LEAVE A REPLY

Please enter your comment!
Please enter your name here