ಪುದುವೆಟ್ಟು ಶ್ರೀ ಧ.ಮಂ.ಅ.ಹಿ.ಪ್ರಾ.ಶಾಲೆಯಲ್ಲಿ ಯಕ್ಷಗಾನ ತರಬೇತಿ ಪ್ರಾರಂಭೋತ್ಸವ: ಯಕ್ಷಗಾನದಿಂದ ಸಂಸ್ಕಾರ ಸಂಸ್ಕೃತಿ ಬೆಳೆಯುತ್ತದೆ- ಬಿ.ಸೋಮಶೇಖರ ಶೆಟ್ಟಿ

0

ಪುದುವೆಟ್ಟು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪುದುವೆಟ್ಟು ಇಲ್ಲಿ ಯಕ್ಷಗಾನ ತರಬೇತಿಯ ಪ್ರಾರಂಭೋತ್ಸವವನ್ನು ರಾಜ್ಯ ಪ್ರಶಸ್ತಿ ಪುರಸ್ಕೃತ ರಾದ ಬಿ.ಸೋಮಶೇಖರ್ ಶೆಟ್ಟಿ ಜ್ಯೋತಿ ಪ್ರಜ್ವಲನ ಮಾಡುವುದರ ಮೂಲಕ ಉದ್ಘಾಟಿಸಿ ಎಸ್ ಡಿ ಎಮ್ ಶಿಕ್ಷಣ ಸಂಸ್ಥೆಗಳಲ್ಲಿ ಪಠ್ಯಕ್ಕೆ ಕೊಟ್ಟಷ್ಟು ಮಹತ್ವವನ್ನು ಸಹಪಠ್ಯ ಚಟುವಟಿಕೆಗಳಿಗೆ ನೀಡಿ ವಿದ್ಯಾರ್ಥಿಗಳ ಸರ್ವತೋಮುಖ ವ್ಯಕ್ತಿತ್ವ ರೂಪಿಸುವುದು ಆಡಳಿತ ಮಂಡಳಿಯ ಆಶಯವಾಗಿದೆ ಈ ನಿಟ್ಟಿನಲ್ಲಿ ಯಕ್ಷಗಾನ ತರಬೇತಿ ಪ್ರಾರಂಭಿಸುವುದು ಉತ್ತಮ ಬೆಳವಣಿಗೆಯಾಗಿದೆ, ನಮ್ಮ ಸಂಸ್ಕೃತಿ ಸಂಸ್ಕಾರ ಮತ್ತು ವ್ಯಕ್ತಿತ್ವ ಬೆಳವಣಿಗೆಗೆ ಇದು ಪೂರಕವಾಗಿದೆ ಎಂದು ಅಭಿಪ್ರಾಯಪಟ್ಟರು.

ವೇದಿಕೆಯಲ್ಲಿ ಆಸೀನರಾಗಿದ್ದ ಯಕ್ಷಗಾನ ತರಬೇತುದಾರರಾದ ಅರುಣ್ ಕುಮಾರ್ ಧರ್ಮಸ್ಥಳ ಇವರು ಯಕ್ಷಗಾನ ತರಗತಿಗೆ ಸೇರಿದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ಶೀನಪ್ಪ ಗೌಡರವರು ಈ ಯಕ್ಷಗಾನ ತರಬೇತಿಯ ಪ್ರಯೋಜನವನ್ನು ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಏಳನೇ ತರಗತಿಯ ಮಕ್ಕಳಿಂದ ರಚಿತವಾದಂತಹ ಚಂದ್ರಯಾನ ಎನ್ನುವ ವಿಷಯದ ಕುರಿತು ಸುನಾದ ಎನ್ನುವ ಹೆಸರಿನೊಂದಿಗೆ ಶಾಲಾ ಬಿತ್ತಿ ಪತ್ರವನ್ನು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿಯಾದ ಸೋಮಶೇಖರ್ ಸರ್ ಅವರು ಅನಾವರಣಗೊಳಿಸಿದರು.

ವಿದ್ಯಾರ್ಥಿಗಳ ಪ್ರಾರ್ಥನ ಗೀತೆಯೊಂದಿಗೆ ಆರಂಭಗೊಂಡಂತಹ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಶೀನಪ್ಪಗೌಡ ರವರು ಸ್ವಾಗತಿಸಿ, ಶಾಲೆಯ ಶಿಕ್ಷಕರಾದ ಪವನ್ ಕುಮಾರ್ ಧನ್ಯವಾದಗೈದ ಕಾರ್ಯಕ್ರಮವನ್ನು ನಿಶಾಂತ್ ಕುಮಾರ್ ರವರು ನಿರೂಪಿಸಿದರು, ಶಾಲೆಯ ಎಲ್ಲ ಶಿಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಸಹಕರಿಸಿದರು.

LEAVE A REPLY

Please enter your comment!
Please enter your name here