

ಮಿತ್ತಬಾಗಿಲು: ಮಿತ್ತಬಾಗಿಲು ಗ್ರಾಮ ಪಂಚಾಯತ್ ನ 2023-24ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಜು.03 ರಂದು ಗ್ರಾಮ ಪಂಚಾಯತ್ ಕಛೇರಿ ಸಮುದಾಯ ಭವನದಲ್ಲಿ ಲತಾ ಇವರ ಅಧ್ಯಕ್ಷತೆಯಲ್ಲಿ ಗ್ರಾಮಸಭೆಯು ತಾರಾಕೇಶ್ವರಿ ಅಕ್ಚರದಾಸೋಹ ಇಲಾಖೆ ಬೆಳ್ತಂಗಡಿ ಇವರ ಮಾರ್ಗದರ್ಶನದಲ್ಲಿ ಮುನ್ನಡೆಸಿದರು.

ವೇದಿಕೆಯಲ್ಲಿ ಉಪಾಧ್ಯಕ್ಷರಾದ ವಿನಯ ಚಂದ್ರ, ಸದಸ್ಯರುಗಳಾದ ರಾಮಣ್ಣ, ಚಂದ್ರಶೇಖರ ಗೌಡ, ಶಾಹುಲ್ ಹಮೀದ್, ಮೋಹಿನಿ, ಶಾಂಭವಿ, ಅಹಮ್ಮದ್ ಕಬೀರ್, ಚೇತನ, ಇಲಾಖೆ ಅಧಿಕಾರಿಗಳಾದ ಮೆಸ್ಕಾಂ ಎಸ್.ಎನ್ ಕೃಷ್ಣೆಗೌಡ ಮತ್ತು ಮಧು.ಎಂ, ಸಂತೋಷ್ ಕುಮಾರ್ ಗ್ರಾಮ ಆಡಳಿತ ಅಧಿಕಾರಿ ಮಿತ್ತಬಾಗಿಲು, ಎನ್.ಎಸ್.ಹರ್ಷಿತ್ ಪಂಚಾಯತ್ ರಾಜ್ ಇಂಜಿನಿಯರ್, ಪ್ರಶಾಂತ್ ಪೂಜಾರಿ ಸಿ ಆರ್ ಪಿ ಶಿಕ್ಷಣ ಇಲಾಖೆ, ಪ್ರಶಾಂತ್ ಕುಮಾರ್ ಪಶುಸಂಗೋಪನೆ ಇಲಾಖೆ, ನಾಗಶಾಯನ ಪಶುಸಂಗೋಪನೆ, ಲಲಿತಾ.ಎಚ್ ಮಹಿಳಾ ಮತ್ತು ಮಕ್ಕಳ ಇಲಾಖೆ, ರಾಜು ಗೌಡ ವನ್ಯಜೀವಿ ಇಲಾಖೆ, ರವೀಂದ್ರ ಅರಣ್ಯ ಇಲಾಖೆ, ನವನೀತ ಗೌಡ ಕೆ.ಎನ್ ಕೃಷಿ ಇಲಾಖೆ, ಉಷಾ, ರೇಣುಕಾ ಎಸ್ಎಂ ಆರೋಗ್ಯ ಇಲಾಖೆ, ವಿನಿಷ ತಾಲೂಕು ಪಂಚಾಯತ್ ಬೆಳ್ತಂಗಡಿ ಮತ್ತು ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರು, ಸಂಜೀವಿನಿ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ನಾಡಗೀತೆಯ ಮೂಲಕ ಕಪ್ರಾರಂಭಿಸಿ ಗ್ರಾಮ ಲೆಕ್ಕಾಧಿಕಾರಿ ಜಯಕೀರ್ತಿ ಎಚ್.ಎ ಇವರು ಸ್ವಾಗತಿಸಿ, ವಂದಿಸಿದರು.