ಬೆಳ್ತಂಗಡಿ ಸೋಜಾ ಎಲೆಕ್ಟ್ರಾನಿಕ್ಸ್ ಇದರ ಆಶ್ರಯದಲ್ಲಿ ಮಳಿಗೆ ಹಾಗೂ ಡೆಮೋ ವೀಕ್ಷಿಸಿ-ಉಚಿತ ಕೂಪನ್ ಗಳಿಸಿ ಯೋಜನೆಯ ಉದ್ಘಾಟನಾ ಕಾರ್ಯಕ್ರಮ

0

ಬೆಳ್ತಂಗಡಿ: ಸೋಜಾ ಎಲೆಕ್ಟ್ರಾನಿಕ್ಸ್ ಬೆಳ್ತಂಗಡಿ ಇದರ ಆಶ್ರಯದಲ್ಲಿ ಮಳಿಗೆ ಹಾಗೂ ಡೆಮೋ ವೀಕ್ಷಿಸಿ- ಉಚಿತ ಕೂಪನ್ ಗಳಿಸಿ ಯೋಜನೆಯ ಉದ್ಘಾಟನಾ ಕಾರ್ಯಕ್ರಮ ಜು.03ರಂದು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಕಾಥೊಲಿಕ್ ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿ ಇದರ ಪ್ರಧಾನ ಕಛೇರಿಯ ಮ್ಯಾನೇಜರ್ ಕು.ಮಲ್ಲಿಕಾ ಮೋನಿಸ್, ಸುದ್ದಿ ಬಿಡುಗಡೆ ವಾರಪತ್ರಿಕೆಯ ಮ್ಯಾನೇಜರ್ ಮಂಜುನಾಥ್, ನಮ್ಮ ಗ್ರಾಹಕ ಉದಯವಾಣಿ ಪತ್ರಿಕೆಯ ಗುರು ಮುಂಡಾಜೆ, ಗ್ರಾಹಕ ಮತ್ತು ಕೃಷಿಕ ಹರೀಶ್ಚಂದ್ರ ತಾಮನ್ಕರ್ ರವರು ಆಗಮಿಸಿದ್ದರು.

ಸೋಜಾ ಸಂಸ್ಥೆಯ ಆಡಳಿತ ಪಾಲುದಾರರಾದ ಅಲ್ಫೋನ್ಸ್ ಫ್ರಾಂಕೊ, ಮ್ಯಾನೇಜರ್ ಲಾನ್ಸಿ ಡಿ’ಸೋಜಾ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಅಸೀನಾರವರು ನಿರೂಪಿಸಿ, ರಮೇಶ್ ಸ್ವಾಗತಿಸಿ, ಶುಶ್ಮಿತಾರವರು ವಂದಿಸಿಸದರು.ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.ಎಲ್ಲರಿಗೂ ಸಿಹಿಯನ್ನು ವಿತರಿಸಲಾಯಿತು.

LEAVE A REPLY

Please enter your comment!
Please enter your name here