


ಉಜಿರೆ: ಭಾರತೀಯ ಭೂ ಸೇನೆಯಲ್ಲಿ 30 ವರ್ಷ ಸೇವೆ ಸಲ್ಲಿಸಿದ ಉಜಿರೆ ನಿವಾಸಿ ನಿವೃತ್ತ ಸುಬೇದಾರ್ ಮೆಲ್ವಿನ್ ಫೆರ್ನಾಂಡೀಸ್ ಅವರಿಗೆ ಉಜಿರೆಯಲ್ಲಿ ಸ್ವಾಗತ ಮಾಡಲಾಯಿತು.

ಈ ಸಂದರ್ಭದಲ್ಲಿ ಉಜಿರೆ ಶ್ರೀ ಜನಾರ್ಧನ ದೇವಸ್ಥಾನದ ಆಡಳಿತ ಮೊಕೇಸ್ತರಾದ ಶರತ್ ಕೃಷ್ಣ ಪಡುವೆಟ್ನಾಯ, ಮಂಗಳೂರು ನಗರ ಪಾಲಿಕೆ ಆಯುಕ್ತ ಆನಂದ, ಉಜಿರೆ ಸಂತ ಆಂತೋನಿ ಚರ್ಚ್ ಧರ್ಮಗುರು ಜೇಮ್ಸ್ ಡಿ.ಸೋಜ, ಅನುಗ್ರಹ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಜಯ್ ಲೋಬೋ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಆಂಟನಿ ಫೆರ್ನಾಂಡೀಸ್, ಹಳ್ಳಿಮನೆ ಪ್ರವೀಣ್ ಫೆರ್ನಾಂಡಿಸ್, ವಲೇರಿಯನ್ ಪಿಂಟೋ, ಮೋಹನ್ ಶೆಟ್ಟಿಗಾರ್, ಹಮೀದ್, ನಿವೃತ್ತ ಸೈನಿಕರ ಸಂಘದ ಸದಸ್ಯರುಗಳಾದ ಜಗನ್ನಾಥ ಶೆಟ್ಟಿ, ತಂಗಚ್ಚನ್, ಹೆರಾಲ್ಡ್ ಸಿಕ್ವೇರಾ, ವಾಲ್ಟರ್ ಸಿಕ್ವೇರಾ, ವಿಕ್ಟರ್, ಹೆನ್ರಿ, ಉಮೇಶ್ ಬಂಗೇರ, ಉಜಿರೆ ವರ್ತಕ ಸಂಘದ ಸದಸ್ಯರು, ನಾಗರಿಕರು, ಉಜಿರೆ ಸಂತ ಅಂತೋನಿ ಚರ್ಚ್ ನ ಸಮಸ್ತ ಕ್ರೈಸ್ತ ಭಾಂದವರು ಉಪಸ್ಥಿತರಿದ್ದರು.
