

ಮುಂಡಾಜೆ ಗ್ರಾಮ ಪಂಚಾಯತ್ 2023-24ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಜು.1ರಂದು ಮುಂಡಾಜೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ರಂಜನಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಗ್ರಾಮಸಭೆಯನ್ನು ವಿರೂಪಾಕ್ಷರಪ್ಪ ಕ್ಷೇತ್ರ ಶಿಕ್ಷಣಾಧಿಕಾರಿ ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳ್ತಂಗಡಿ ಇವರ ಮಾರ್ಗದರ್ಶನದಲ್ಲಿ ಮುನ್ನಡೆಸಿದರು.

ವೇದಿಕೆಯಲ್ಲಿ ಉಪಾಧ್ಯಕ್ಷರಾದ ರಿಶಾ ಪಟವರ್ಧನ್ , ಸದಸ್ಯರುಗಳಾದ ವಿಮಲಾ ಎಚ್ ಎಸ್, ಸುಮಲತಾ ಯಶೋಧ ಅಶ್ವಿನಿ ರಾಮಣ್ಣ ಶೆಟ್ಟಿ ವಿಶ್ವನಾಥ್ ಶೆಟ್ಟಿ ಗಣೇಶ್ ಬಂಗೇರ ರವಿಚಂದ್ರ, ಜಗದೀಶ ಹಾಗೂ ಇಲಾಖೆ ಅಧಿಕಾರಿಗಳಾದ ಅಮ್ಮಿ ಬಿ.ಪಿ ಕಾರ್ಯದರ್ಶಿ ಗ್ರಾಮ ಪಂಚಾಯತ್ ಮುಂಡಾಜೆ, ರೂಪಲತಾ ಪ್ರಾಥಮಿಕ ಸಂರಕ್ಷಣಾಧಿಕಾರಿ ಮುಂಡಾಜೆ, ಎನ್ ಎಸ್ ಕೃಷ್ಣೇಗೌಡ, ಮೆಸ್ಕಾಂ ಹರ್ಷಿತ್, ಪ್ರಶಾಂತ್ ಪೂಜಾರಿ ಸಿ ಆರ್ ಪಿ ಶಿಕ್ಷಣ ಇಲಾಖೆ ಮುಂಡಾಜೆ, ಧೀರಜ್ ಸಮಾಜ ಕಲ್ಯಾಣ ಇಲಾಖೆ ಎಂ ಚಂದ್ರಕಾಂತ ಪ್ರಭು CEO ಮುಂಡಾಜೆ, ಪ್ರದೀಪ್ ಕುಮಾರ್, ನಾಗಶಾಯನ ಪಶುಸಂಗೋಪನೆ, ಮಹಾವೀರ್ ತೋಟಗಾರಿಕೆ ಇಲಾಖೆ, ಲಲಿತಾ ಎಚ್ ಮಹಿಳಾ ಮತ್ತು ಮಕ್ಕಳ ಇಲಾಖೆ ಮತ್ತು ಆಶಾ ಕಾರ್ಯಕರ್ತರು ,ಅಂಗನವಾಡಿ ಕಾರ್ಯಕರು , ಸಂಜೀವಿನಿ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ನಾಡಗೀತೆಯ ಮೂಲಕ ಕಾಲೇಜು ವಿದ್ಯಾರ್ಥಿಗಳು ಪ್ರಾರಂಭಿಸಿ ಗ್ರಾಮ ಲೆಕ್ಕಾಧಿಕಾರಿ ಗಾಯತ್ರಿ ಇವರು ಸ್ವಾಗತಿಸಿ, ವರದಿಯನ್ನು ಮಂಡಿಸಿದರು.