ಅರಸಿನಮಕ್ಕಿ: ಅರಸಿನಮಕ್ಕಿ ಗ್ರಾಮ ಪಂಚಾಯತ್ ನ 2023- 24ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ಕೆಎನ್ ನವೀನ್ ಅಧ್ಯಕ್ಷತೆಯಲ್ಲಿ ಜೂನ್ 28ರಂದು ಜರಗಿತು.
ಮಾರ್ಗದರ್ಶಿ ಅಧಿಕಾರಿಯಾಗಿ ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆಯ ಹೇಮಲತಾ ಇವರು ಆಗಮಿಸಿ ಗ್ರಾಮ ಸಭೆಯನ್ನು ಮುನ್ನಡೆಸಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶಕುಂತಲಾ ಸದಸ್ಯರುಗಳಾದ ಸೌಮ್ಯ, ಲಾವಣ್ಯ, ಸುಮಿತ್ರ, ಚೇತನ್ ಕುಮಾರ್, ಜನಾರ್ಧನ್, ಗಾಯತ್ರಿ, ವಿಶಾಲಾಕ್ಷಿ, ಪ್ರೇಮ ಚಂದ್ರ, ಸುಧೀರ್, ಪುಷ್ಪ ಉಪಸ್ಥಿತರಿದ್ದರು.
ಇಲಾಖೆ ಅಧಿಕಾರಿಗಳಾದ ಮೆಸ್ಕಾಂ ಇಲಾಖೆಯ ಮಂಜುನಾಥ್ ಎ, CHO ಅಂಬಳಿ ಜೇಕಬ್ , ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂ ಷಕಿ ರೇಖ್ಯಾ ಸುಚಿತ್ರ ಎಂ , ಅಂಗನವಾಡಿ ಕಾರ್ಯಕರ್ತೆಯರಾದ ಸುನಂದ ಎಂ ನಾವಳಪಾಲೆಂಜ, ನೀಶಾಮಾಳ ರೆಖ್ಯ, ಶೆರ್ಲಿ EM ನೇಲ್ಯಾಡ್ಕ, ಶಾಂತ ಶಾಜಿ ಮೂಡೋಮಾರ್, ಭಾರತಿ ಹೋಸ್ತೊಟ, ರಾಜಶ್ರಿ ಕೊಳೆಚ್ಚಾವು ರೆಖ್ಯ, ವಿಜಯಿ ಕೆ ಅರಸಿನ ಮಕ್ಕಿ ಮತ್ತು ಆಶಾ ಕಾರ್ಯಕರ್ತೆಯರಾದ ಸರೋಜಿನಿ ನಾಯ್ಕ, ಪಾರ್ವತಿ, ಕವಿತಾ, ಹಾಗೂ ಸಂಜೀವಿನಿ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.
ಪ್ರಾಥಮಿಕ ಆರೋಗ್ಯ ಕೇಂದ್ರ ಅರಿಸಿನಮಕ್ಕಿಯಲ್ಲಿ ವೈದ್ಯರ ಕೊರತೆಯನ್ನು ಕಳೆದ ಬಾರಿಯ ಗ್ರಾಮ ಸಭೆಯಲ್ಲಿ ನಿರ್ಣಯ ಮಾಡಲಾಗಿತ್ತು ಆದರೆ ಈ ಗ್ರಾಮ ಸಭೆಯವರಿಗೂ ಯಾವುದೇ ವೈದ್ಯಾಧಿಕಾರಿಯ ನೇಮಕ ಆಗಿರುವುದಿಲ್ಲ ಮತ್ತೆ ಈ ಗ್ರಾಮ ಸಭೆಯಲ್ಲಿ ಮತ್ತೆ ನಿರ್ಣಯ ಮಾಡಿ ಕಳುಹಿಸಲಾಯಿತು ಒಂದು ವೇಳೆ ಯಾವುದೇ ರೀತಿಯ ಪ್ರತಿಕ್ರಿಯೆ ಸಿಗದಿದ್ದಲ್ಲಿ ಗ್ರಾಮಸ್ಥರು ಮತ್ತು ಪಂಚಾಯತ್ ಸೇರಿ ಹೋರಾಟ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು.
ಪಂಚಾಯತ್ ಅಧ್ಯಕ್ಷರು ಮಾತನಾಡಿ ಗ್ರಾಮಸ್ಥರು ಎಲ್ಲರೂ ಸಹಕಾರ ಕೊಡಬೇಕು ಸಹಕಾರ ನೀಡಿದರೆ ಮಾತ್ರ ಪಂಚಾಯತ್ ಹಾಗೂ ಗ್ರಾಮ ಅಭಿವೃದ್ಧಿ ಆಗಬಹುದು ನನಗೆ ಗ್ರಾಮಸ್ಥರು ಮತ್ತು ಎಲ್ಲಾ ಇಲಾಖೆಯ ಅಧಿಕಾರಿಗಳು ಸಲಹೆ ಮತ್ತು ಸಹಕಾರವನ್ನು ನೀಡಿದ್ದೀರಿ ಮುಂದೆಯೂ ನಿಮ್ಮ ಸಹಕಾರವನ್ನು ಬಯಸುತ್ತೇನೆ ಎಂದು ಹೇಳಿದರು.
ಗುಮಾಸ್ತೆ ವಿಂದ್ಯಶ್ರೀ ವಾರ್ಡಿ ಸಭೆಗಳಲ್ಲಿ ಬಂದಂತಹ ಜಮಾ ಖರ್ಚಿನ ಬಗ್ಗೆ ಹೇಳಿದರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸ್ವಾಗತಿಸಿ ವಂದಿಸಿದರು.