ಅರಸಿನಮಕ್ಕಿ: ಬೆಳ್ತಂಗಡಿಯ ಶಾಸಕರಾಗಿ ಎರಡನೇ ಬಾರಿಗೆ ಚುನಾಯಿತರಾಗಿರುವ ಶಾಸಕರಾದ ಹರೀಶ್ ಪೂಂಜರವರಿಗೆ ಕಾರ್ಯಕರ್ತರಿಂದ ಅಭಿನಂದನೆ ಮತ್ತು ಚುನಾವಣಾ ಅವಲೋಕನ ಸಭೆಯು ಅರಸಿನಮಕ್ಕಿಯಲ್ಲಿ ಜೂ.27ರಂದು ನಡೆಯಿತು.
ಗ್ರಾಮ ಪಂಚಾಯತ್ ಸದಸ್ಯರಾದ ಸುಧೀರ್ ಕುಮಾರ್ ಎಂ.ಎಸ್. ರವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಹರೀಶ್ ಪೂಂಜ ಚುನಾವಣೆಯಲ್ಲಿ ಕಾರ್ಯಕರ್ತರ ಪರಿಶ್ರಮವನ್ನು ವಿಶೇಷವಾಗಿ ಕೊಂಡಾಡಿದರು. ಬಿಜೆಪಿ ಚುನಾವಣೆಗೆ ಸೀಮಿತವಾದ ಪಕ್ಷವಲ್ಲ. ದೇಶ ಮತ್ತು ಹಿಂದುತ್ವದ ರಕ್ಷಣೆಗಾಗಿ ಜನರ ಮಧ್ಯೆ ಇದ್ದು ನಿರಂತರವಾಗಿ ಕೆಲಸ ಮಾಡುವ ಪಕ್ಷವಾಗಿದೆ. ಸದಾ ಜನರ ಕಷ್ಟ, ನೋವುಗಳಿಗೆ ಸ್ಪಂದಿಸುವ ಕಾರ್ಯಕರ್ತರನ್ನು ಬಿಜೆಪಿಯಲ್ಲಿ ಮಾತ್ರ ನೋಡಲು ಸಾಧ್ಯ ಸಂಘಟನೆಯನ್ನು ಇನ್ನಷ್ಟು ಬಲಗೊಳಿಸಿ ಕೇಂದ್ರ ಸರಕಾರದ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಿ ಮುಂದಿನ ವರ್ಷ ನಡೆಯುವ ಚುನಾವಣೆಯಲ್ಲಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಮಂತ್ರಿಯಾಗಿ ಆಯ್ಕೆ ಮಾಡುವಲ್ಲಿ ಅವಿರತವಾಗಿ ದುಡಿಯೋಣ ಎಂದರು.
ಈ ಸಂದರ್ಭದಲ್ಲಿ ಶಾಸಕರನ್ನು ಹತ್ಯಡ್ಕ ಮತ್ತು ರೆಖ್ಯದ ಬಿಜೆಪಿ ಕಾರ್ಯಕರ್ತರು ಸನ್ಮಾನಿಸಿ ಗೌರವಿಸಿದರು.
ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ರಾವ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಹಾಶಕ್ತಿಕೇಂದ್ರ ಅಧ್ಯಕ್ಷ ಯೋಗೀಶ್ ಆಲಂಬಿಲ, ಕಾರ್ಯದರ್ಶಿ ಕರುಣಾಕರ ಶಿಶಿಲ, ಹತ್ಯಡ್ಕ ಶಕ್ತಿಕೇಂದ್ರ ಪ್ರಮುಖ್ ಗಣೇಶ್ ಹೊಸ್ತೋಟ, ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ರಾಜು ಕೆ. ಸಾಲಿಯಾನ್, ಸುಧೀರ್ ಕುಮಾರ್ ಎಂ. ಎಸ್. ಉಪಸ್ಥಿತರಿದ್ದರು. ಪಂ. ಉಪಾಧ್ಯಕ್ಷೆ ಶಕುಂತಲಾ ಆಚಾರ್ಯ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಪ್ರೇಮಚಂದ್ರ ಕೆ., ಸೌಮ್ಯ ತುಳುಪುಳೆ, ಲಾವಣ್ಯ ನಾಗೇಶ್ ಜಾಗ್ಯಂಡ, ಜನಾರ್ದನ ರೆಖ್ಯ, ತಾ.ಪಂ. ಮಾಜಿ ಸದಸ್ಯರಾದ ಮಂಜುಳಾ ಕಾರಂತ್, ಹಿರಿಯರಾದ ನರಸಿಂಹ ಪಾಳಂ, ವರದಶಂಕರ ದಾಮಲೆ, ಕೃಷ್ಣಪ್ಪ ಸುಂದರ ರಾಣ್ಯ, ಸಂಜೀವ ಶೆಟ್ಟಿಗಾರ್, ವಿವಿಧ ಬೂತ್ ಗಳ ಅಧ್ಯಕ್ಷ, ಕಾರ್ಯದರ್ಶಿ, ಪದಾಧಿಕಾರಿಗಳು ಉಪಸ್ಥಿತರಿದ್ದರು. ರೇಣುಕಾ ಪ್ರಾರ್ಥಿಸಿದರು. ಸುಧೀರ್ ಕುಮಾರ್ ಸ್ವಾಗತಿಸಿದರು. ವೃಷಾಂಕ್ ಖಾಡಿಲ್ಕರ್ ನಿರೂಪಿಸಿ ವಂದಿಸಿದರು.