ಅನುಗ್ರಹದಲ್ಲಿ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ

0

ಉಜಿರೆ: ಅನುಗ್ರಹ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಶಾಲಾ ಸಭಾಭವನದಲ್ಲಿ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಸಂಸ್ಥೆಯ ಪ್ರಾಂಶುಪಾಲರಾದ ವಂ!ಫಾ! ವಿಜಯ್ ಲೋಬೋರವರು ಶಾಂತಿವನ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ವೈದ್ಯರುಗಳು ಹಾಗೂ ಶಾರೀರಿಕ ಶಿಕ್ಷಕ ವಸಂತ ಹೆಗ್ಡೆರವರ ಜೊತೆಗೂಡಿ ದೀಪಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಹಾಗೂ ಯೋಗದಿನಾಚರಣೆಗೆ ಶುಭ ಕೋರಿದರು.

ತದನಂತರ ಡಾ.ಸೂರ್ಯಾಂಶ್, ಡಾ.ವಂಶಿಕಾ, ಡಾ.ನವ್ಯ ಹಾಗೂ ಡಾ.ಗಣೇಶ್ ರವರ ಮಾರ್ಗದರ್ಶನದಲ್ಲಿ ಯೋಗ ಪ್ರಾತ್ಯಕ್ಷಿಕೆ ನಡೆಯಿತು.

ಹಿರಿಯ ಶಿಕ್ಷಕಿ ವಿನಯಲತಾಯವರು ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here