ಕಳಿಯ: ಸಹಕಾರಿ ಸಂಘದ ನೂತನ ಗೋದಾಮು ಕಟ್ಟಡ ಉದ್ಘಾಟನೆ, ರೈತಾಪಿ ಸದಸ್ಯರಿಗೆ ಉಚಿತ ಮೈಲುತುತ್ತು ವಿತರಣೆ ಮತ್ತು ಶಾಸಕ ಹರೀಶ್ ಪೂಂಜ ಮತ್ತು ಡಾ.ರಾಜೇಂದ್ರ ಕುಮಾರ್ ಅವರಿಗೆ ಅಭಿನಂದನಾ ಕಾರ್ಯಕ್ರಮ

0

ಕಳಿಯ: ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಗೊದಾಮು ಕಟ್ಟಡ ಉದ್ಘಾಟನೆ, 2 ನೇ ಬಾರಿಗೆ ಆಯ್ಕೆಯಾದ ಶಾಸಕ ಹರೀಶ್ ಪೂಂಜ ಮತ್ತು ಮದರ್ ತೆರೆಸಾ ಮೆಮೋರಿಯಲ್ ನ್ಯಾಷನಲ್ ಅವಾರ್ಡ್ ಪುರಸ್ಕೃತ ಡಾ.ರಾಜೇಂದ್ರ ಕುಮಾರ್ ಅವರಿಗೆ ಅಭಿನಂದನ ಕಾರ್ಯಕ್ರಮ ಉಚಿತ ಮೈಲುತುತ್ತು ವಿತರಣಾ ಕಾರ್ಯಕ್ರಮ ಜೂ. 21 ರಂದು ಸಹಕಾರಿ ಭವನದಲ್ಲಿ ನಡೆಯಿತು.
ಸಂಘದ ನೂತನ ಗೋದಾಮು ಕಟ್ಟಡವನ್ನು ಹಾಗೂ ಸಂಘದ ಕಾರ್ಯವ್ಯಾಪ್ತಿಯ ಎನ್ ಸಿ ಎಸ್ ನೋಂದಾಯಿಸಿ ದ ರೈತಾಪಿ ಸದಸ್ಯರಿಗೆ ಉಚಿತ ಮೈಲುತುತ್ತು ವಿತರಣಾ ಕಾರ್ಯಕ್ರಮವನ್ನು ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ದೀಪ ಪ್ರಜ್ವಲಿಸಿ ಮೂಲಕ ಉದ್ಘಾಟಿಸಿದರು.

ಗಣ್ಯರನ್ನು ಮುಖ್ಯರಸ್ತೆಯಿಂದ ಚೆಂಡೆ,ವಾದ್ಯ ಗಳ ಮೂಲಕ ಮೆರವಣಿಗೆಯಲ್ಲಿ ಸಂಭಾಂಗಣಕ್ಕೆ ಕರೆತರಲಾಯಿತು.


ಕಾರ್ಯಕ್ರಮದಲ್ಲಿ ಪುತ್ತೂರು ವಿಭಾಗದ ಸಹಕಾರಿ ಸಂಘಗಳ ಸಹಾಯಕ ನಿಬಂಧಕರು ತ್ರಿವೇಣಿ ರಾವ್, ಬೆಳ್ತಂಗಡಿ ಸಹಕಾರಿ ಸಂಘಗಳ ಅಭಿವೃದ್ಧಿ ಅಧಿಕಾರಿ ಪ್ರತಿಮ, ಕಳಿಯ ಗ್ರಾ.ಪಂ.ಅಧ್ಯಕ್ಷೆ ಸುಭಾಷಿಣಿ ಕೆ, ಕುವೆಟ್ಟು ಗ್ರಾ.ಪಂ.ಅಧ್ಯಕ್ಷೆ ಆಶಾಲತಾ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಳಿಯ ಪ್ರಾಥಮಿಕ ಕೃಷಿ ಸಹಕಾರಿ ಸಂಘದ ಅಧ್ಯಕ್ಷ ವಸಂತ ಮಜಲು ವಹಿಸಿದ್ದರು.ಉಪಾಧ್ಯಕ್ಷ ನಾಣ್ಯಪ್ಪ ಪೂಜಾರಿ ಕಲ್ಲಾಪು, ಮುಖ್ಯಕಾರ್ಯನಿರ್ವಹಣಾಧಿಕಾರಿ ಸತ್ಯಶಂಕರ ಕೆ.ಜಿ.
ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರುಗಳಾದ ಯಂ.ಹರಿದಾಸ ಪಂಡತ್ತಾಯ ಮಲವೂರು, ರಾಜೀವ್ ಗೌಡ ಕಲಾಯಿತೊಟ್ಟು, ದೇವಣ್ಣ ಮೂಲ್ಯ ಕೆರೆಕೋಡಿ, ಶೇಖರ ನಾಯ್ಕ ಸ್ಪೂರ್ತಿ ಗೇರುಕಟ್ಟೆ, ರಾಜ್ಯಪ್ರಕಾಶ್ ಶೆಟ್ಟಿ ಪಡ್ಡೈಲ್, ರತ್ನಾಕರ ಬಳ್ಳಿದಡ್ಡ, ಚಂದ್ರವಾತಿ ಕಟ್ಟದ ಬೈಲ್, ಶಶಿಧರ್ ಶೆಟ್ಟಿ ಹೀರ್ಯ, ನೋಣಯ್ಯ ಕುಂಟಿನಿ,ಮಮತಾ ನಾಳ, ಡಿ.ಸಿ.ಸಿ.ಬ್ಯಾಂಕ್ ಡಿಸಿಸಿ ಬ್ಯಾಂಕ್ ಪ್ರತಿನಿಧಿ ಸಂದೇಶ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನವೋದಯ ಸಂಘದ ಸದಸ್ಯರು, ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರು, ಕಳಿಯ ಗ್ರಾಮ ಪಂಚಾಯತ್ ಪ್ರತಿನಿಧಿಗಳು ಹೆಚ್ಚಿನ ಪ್ರಮಾಣದಲ್ಲಿ ಬಾಗವಹಿಸಿದರು.

LEAVE A REPLY

Please enter your comment!
Please enter your name here