ಗುರುವಾಯನಕೆರೆ: ಎಕ್ಸೆಲ್ ನ ವಿದ್ಯಾರ್ಥಿ ಸಂಜನಾ ಜೆಇಇ ಅಡ್ವಾನ್ಸ್ ನಲ್ಲಿ ರಾಷ್ಟ್ರಕ್ಕೆ 731 ರಾಂಕ್

0

ಗುರುವಾಯನಕೆರೆ: ದೇಶದ ಅತ್ಯಂತ ಪ್ರತಿಷ್ಠಿತ ಇಂಜಿನಿಯರಿಂಗ್ ವ್ಯಾಸಂಗದ ಕೇಂದ್ರಗಳಾದ ಐ ಐ ಟಿ ಪ್ರವೇಶ ಪರೀಕ್ಷೆಯಾದ ಜೆ ಇ ಇ ಅಡ್ವಾನ್ಸ್ ನಲ್ಲಿ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಪೂರ್ವ ಸಾಧನೆ ಮಾಡಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆ ಹಾಗೂ ಸಿ ಇ ಟಿ ಯಲ್ಲೂ ವಿಶೇಷ ಪ್ರತಿಭೆ ತೋರ್ಪಡಿಸಿದ ಸಂಜನಾ ಈರೈನವರ್ ಜೆ ಇ ಇ ಕ್ಲಿಯರ್ ಮಾಡುವುದರ ಜೊತೆಗೆ ರಾಷ್ಟ್ರ ಮಟ್ಟದಲ್ಲಿ 731 ರಾಂಕ್ ಗಳಿಸುವ ಮೂಲಕ ಶ್ರೇಷ್ಠ ಸಾಧಕರಾಗಿ ಗುರುತಿಸಿ ಕೊಂಡಿದ್ದಾರೆ.

ಶೈಕ್ಷಣಿಕ ಸಾಧಕರನ್ನು ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್,ಪ್ರಾಂಶುಪಾಲರು ಮತ್ತು ಪ್ರಾಧ್ಯಾಪಕರು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here