

ಅಳದಂಗಡಿ: ಅಳದಂಗಡಿ ಸುರೇಶ್ ಪೂಜಾರಿ ಅಭಿಮಾನಿ ಬಳಗದಿಂದ ಆಸಕ್ತ ಕಟುಂಬಗಳಿಗೆ ನೆರವು, ದಿನ ಬಳಕೆಯ ಆಹಾರ ಸಾಮಗ್ರಿಗಳ ವಿತರಣೆ, ವಿದ್ಯಾನಿಧಿ ಹಾಗೂ ಧಾರ್ಮಿಕ ಕ್ಷೇತ್ರಕ್ಕೆ ದೇಣಿಗೆ ಇಂತಹ ಅನೇಕ ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬಂದಿರುವ ಸುರೇಶ್ ಪೂಜಾರಿ ಅಭಿಮಾನಿಗ ಬಳಗದಿಂದ ಕರಂಬಾರು ಗ್ರಾಮದ ನಿವಾಸಿ ಲಲಿತಾ ಪೂಜಾರಿ ಇವರು ಅನಾರೋಗ್ಯ ಹಿನ್ನೆಲೆಯಿಂದ ಬಳಲುತ್ತಿದ್ದು ಇವರ ಚಿಕಿತ್ಸಾ ವೆಚ್ಚಕ್ಕೆ ಧನ ಸಹಾಯ ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ಗ್ರೂಫ್ ಸಂಯೋಜಕ ಹರೀಶ್ ಕಲ್ಲಾಜೆ, ವಿಶ್ವನಾಥ ಬಂಗೇರ, ಹಿತೇಶ್ ಸಾವ್ಯ, ದೇವದಾಸ್ ಸಾಲ್ಯಾನ್, ಸದಸ್ಯರಾದ ರಾಜೇಂದ್ರ ಸಾಲ್ಯಾನ್, ಪ್ರಕಾಶ್ ಕಟ್ರಬೈಲ್, ಸನತ್ .ಪಿ ಉಪಸ್ಥಿತರಿದ್ದರು.