ಉಜಿರೆ: ಶ್ರೀ ಧ.ಮಂ.ಅನುದಾನಿತ ಸೆಕಂಡರಿ ಪ್ರೌಢ ಶಾಲಾ ಸಂಸತ್ತಿನ ಚುನಾವಣೆ ಪ್ರಕ್ರಿಯೆ ಜೂ.15 ರಂದು ಶ್ರೀ. ಧ .ಮ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಕ್ಷೇಮಾಪಾಲನಾಧಿಕಾರಿ. ಬಿ.ಸೋಮಶೇಖರ್.ಶೆಟ್ಟಿಯವರು ಅಣಕು ಮತದಾನದ ಮೂಲಕ ಉದ್ಘಾಟಿಸಿ,”ಚುನಾವಣೆ ಮತ್ತು ಮತದಾನ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ” ವಿದ್ಯಾರ್ಥಿಗಳು ಶಾಲಾ ಸಂಸತ್ತ್ ಚುನಾವಣೆಯನ್ನು ಯಾವುದೇ ಆಮಿಷಗಳಿಗೆ ಬಲಿಯಾಗದೆ ಶಾಲಾ ಅಭಿವೃದ್ಧಿಗೆ ಶ್ರಮಿಸುವ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುವುದರ ಮೂಲಕ ಅಮೂಲ್ಯ ಮತವು ಹಾಳಾಗದಂತೆ ಎಚ್ಚರವಹಿಸಿ” ಎನ್ನುವ ಕಿವಿಮಾತು ಹೇಳುವುದರೊಂದಿಗೆ ಶುಭಹಾರೈಸಿದರು.
ವಿದ್ಯುನ್ಮಾನ ಮತಯಂತ್ರವನ್ನು ತಯಾರಿಸಿದ ಶ್ರೀ.ಧ.ಮ ಪಾಲಿಟೆಕ್ನಿಕ್ ಎಲೆಕ್ಟ್ರಾನಿಕ್ ವಿಭಾಗದ ಉಪನ್ಯಾಸಕ ನಿಖಿತ್ ಜೈನ್ ರವರು ವಿದ್ಯಾರ್ಥಿಗಳಿಗೆ ಮತದಾನ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದರು.
ಶ್ರೀ.ಧ.ಮ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿ ಮಂಜುನಾಥ್ ಆಗಮಿಸಿದ್ದರು.
ಶಾಲಾ ಮುಖ್ಯೋಪಾಧ್ಯಾಯ ಸುರೇಶ್.ಕೆ ರವರು ಹಾಗೂ ಶಾಲಾ ಚುನಾವಣಾಧಿಕಾರಿ ಚಂದ್ರಶೇಖರ್ ಭಟ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.ಅಧ್ಯಾಪಕ ವೃಂದದವರು ಉಪಸ್ಥಿತರಿದ್ದು ಚುನಾವಣೆ ಪ್ರಕ್ರಿಯೆ ಯಶಸ್ವಿಗೊಳಿಸಲು ಸಹಕರಿಸಿದರು.