ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕೊಲ್ಲಿಯ ಕಿಲ್ಲೂರು ಶ್ರೀ ಧರ್ಮಸ್ಥಳ ವಿಪತ್ತು ಶೌರ್ಯ ಘಟಕದ ಸದಸ್ಯರಾದ ರತನ್ ಶೆಟ್ಟಿಯವರ ಮನೆಯ ಒಳಗಡೆ ಇದ್ದ ಸೌಂಡ್ ಬಾಕ್ಸ್ ಒಳಗಡೆ ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪ ಜೂ.14 ರಂದು ಸಂಜೆ ಸೇರಿಕೊಂಡಿತ್ತು.
ತಕ್ಷಣ ಸ್ನೇಕ್ ಅಶೋಕ್ ಲಾಯಿಲ ಅವರಿಗೆ ತಿಳಿಸಿದಾಗ ಅವರು ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಹಿಡಿದು ಮನೆಯವರ ಆತಂಕ ದೂರಗೊಳಿಸಿದರು.
ನಂತರ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಚಾರ್ಮಾಡಿ ಘಾಟ್ ಕಾಡಿಗೆ ಬಿಡಲಾಗಿದೆ.
p>