

ಮಾಲಾಡಿ: ಜೂ.10ರಂದು ಅಮೃತ ಸಂಜೀವಿನಿ ಮಹಿಳಾ ಒಕ್ಕೂಟ(ರಿ), ಮಾಲಾಡಿ ಗ್ರಾಮ ಪಂಚಾಯತ್ ಇದರ ಮುಖಾಂತರ ಮಾಲಾಡಿ ಗ್ರಾಮದ ಇಂಚರ ವಾರ್ಡಿನ ಪುರಿಯ ವ್ಯಾಪ್ತಿಯಲ್ಲಿ ಒಕ್ಕೂಟದ ಅಧ್ಯಕ್ಷರ ಮತ್ತು ಕಾರ್ಯದರ್ಶಿಯ ಸಹಯೋಗದಲ್ಲಿ ಶ್ರೀ ದುರ್ಗಾ ಟೈಲರ್ ತರಬೇತಿ ಕೇಂದ್ರ ಶುಭಾರಂಭಗೊಂಡಿತು.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷೆ ರೇಖಾ, ಕಾರ್ಯದರ್ಶಿ ಜ್ಯೋತಿ, ಒಕ್ಕೂಟದ ಪದಾಧಿಕಾರಿಗಳು, ಗ್ರಾಮ ಪಂಚಾಯತ್ ಸದಸ್ಯರಾದ ಸೆಲೆಸ್ಟ್ರಿನ್, ಬೇನಡಿಕ್ಟ್ ಮೀರಂದ, ವಸಂತ ಪೂಜಾರಿ, ಎಂ.ಬಿ.ಕೆ ಕು.ಶಾರದ, ಎಲ್.ಸಿ.ಆರ್.ಪಿ ಗಳು ಕು.ಶರಣ್ಯ,ಶಕುಂತಲಾ ಎಫ್.ಎಲ್.ಸಿ.ಆರ್ ಪಿ ಭಾರತಿ, ಅಂಗನವಾಡಿ ಕಾರ್ಯಕರ್ತೆ ಮೋಹಿನಿ ಮತ್ತು ಸಹಾಯಕಿ, ಸ್ತ್ರೀ ಶಕ್ತಿ, ಸಂಜೀವಿನಿ ಸಂಘದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.