ಬೆಳ್ತಂಗಡಿ: ಕಾನೂನು ಅರಿವು ಮತ್ತು ಸಾಕ್ಷರತಾ ಶಿಬಿರ

0

ಬೆಳ್ತಂಗಡಿ: ಭಾರತದ ನ್ಯಾಯಾಂಗ ಇಲಾಖೆ, ಭಾರತ ಸರಕಾರದ ಕಾನೂನು ಮತ್ತು ನ್ಯಾಯ ಮಂತ್ರಾಲಯ, ಕರ್ನಾಟಕ ಸರಕಾರದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಮೈಸೂರು ಇದರ ಮಾರ್ಗದರ್ಶನದಲ್ಲಿಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಪಂಚಾಯಿತಿಯ ಚುನಾಯಿತ ಪ್ರತಿನಿಧಿಗಳು, ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳು ಮತ್ತು ಸ್ವಸಹಾಯ ಸಂಘದ ಪ್ರತಿನಿಧಿಗಳ ಒಂದು ದಿನದ ಕಾನೂನು ಅರಿವು ಮತ್ತು ಕಾನೂನು ಸಾಕ್ಷರತೆ ಸಂಬಂಧಪಟ್ಟ ತರಬೇತಿ ಕಾರ್ಯಗಾರವು ಇತ್ತೀಚಿಗೆ ಬೆಟ್ತಂಗಡಿ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಜರುಗಿತು.

ಕಾರ್ಯಕ್ರಮವನ್ನು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕುಸುಮಾದರ ಇವರು ಉದ್ಘಾಟಿಸಿ ಕಾನೂನು ಅರಿವು ಪ್ರತಿಯೊಬ್ಬ ನಾಗರಿಕನಿಗೂ ಅವಶ್ಯಕ, ಅದರಲ್ಲೂ ವಿಶೇಷವಾಗಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಸಿಬ್ಬಂದಿಗಳು ಅಲ್ಲದೆ ನಾಗರೀಕರಲ್ಲೂ ಕಾನೂನು ಸಾಕ್ಷರತೆ ಉಂಟಾದರೆ ನಮ್ಮ ದೇಶ ಶಾಂತಿಯುತವಾಗಿ ಇರುವುದು ಎಂದರು.

ಕಾರ್ಯಕ್ರಮದಲ್ಲಿ ಅಬ್ದುಲ್ ರಜಿದ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ತರಬೇತಿ ಸಂಯೋಜಕ ಚಂದ್ರಶೇಖರ್ ಪಿಕೆ ಮತ್ತು ಶ್ರೀಮತಿ ಪ್ರತಿಮಾ ಯು ರೈ ಉಪಸ್ಥಿತರಿದ್ದರು. ತಾಲೂಕು ಕಾನೂನು ಸೇವೆಗಳ ಸಮಿತಿಯ ಸದಸ್ಯರು ನ್ಯಾಯವಾದಿಗಳು ಆದ ಫಾತಿಮಾ ಬೇಗಂ ಮತ್ತು ಪ್ರಿಯದರ್ಶಿನಿ ಇವರು ತರಬೇತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮತ್ತು ಪೊಲೀಸ್ ಇಲಾಖೆಯ ಪ್ರತಿನಿಧಿಗಳು ಕೂಡ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿದರು.ಮಡಂತ್ಯಾರು, ಬಳಂಜ ಮತ್ತು ಬಂದಾರು ಗ್ರಾಮ ಪಂಚಾಯತಿಯ ಚುನಾಯಿತ ಪ್ರತಿನಿಧಿಗಳು, ಅಧಿಕಾರಿ ಮತ್ತು ಸಿಬ್ಬಂದಿಗಳು ಮತ್ತು ಸ್ವಸಹಾಯ ಸಂಘದ ಪ್ರತಿನಿಧಿಗಳನ್ನು ಒಳಗೊಂಡ ತರಬೇತಿ ಕಾರ್ಯಗಾರವು ದಿನವಿಡಿ ನಡೆಯಿತು ಮಹಿಳಾ ಮತ್ತು ಮಕ್ಕಳ ರಕ್ಷಣೆಗೆ ಸಂಬಂಧಪಟ್ಟ ಕಾನೂನುಗಳು ಮತ್ತು ಹಿರಿಯ ನಾಗರಿಕರ ದೌರ್ಜನ್ಯ ತಡೆಯ ಕಾಯಿದೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ, ಶಿಕ್ಷಣ ಹಕ್ಕು ಕಾಯಿದೆ, ಮಾಹಿತಿ ಹಕ್ಕು ಅದಿನಿಯಮ ಇತ್ಯಾದಿ ವಿಷಯಗಳ ಬಗ್ಗೆ ತರಬೇತಿಯನ್ನು ನಡೆಸಲಾಯಿತು.

ನ್ಯಾಯವಾದಿಗಳಾದ ಶೈಲೇಶ್ ಟೊಸರ್, ಶ್ರೀಮತಿ ಫಾತಿಮಾ ವೇಗಂ ಮತ್ತು ಶ್ರೀಮತಿ ಸುಭಾಷಿನಿ,ಆರಕ್ಷಕ ಇಲಾಖೆಯ ಮಹಿಳಾ ಮತ್ತು ಮಕ್ಕಳ ಸಂರಕ್ಷಣಾಧಿಕಾರಿ ಶ್ರೀಮತಿ ಸುನೀತ ,ಕ್ಷೇತ್ರ ಶಿಕ್ಷಣಾಧಿಕಾರಿಗಳು ಶ್ರೀ ವಿರೂಪಾಕ್ಷಪ್ಪ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಕುಸುಮಾಧರ ಮತ್ತು ಸಹಾಯಕ ನಿರ್ದೇಶಕರು ಶ್ರೀಮತಿ ಸಫಾನ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಸಹಕರಿಸಿದರು.ಕೊನೆಯಲ್ಲಿ ಕೇಂದ್ರೀಕತ ತರಬೇತಿ ಸಂಯೋಜಕರಾದ ಶ್ರೀಮತಿ ಪ್ರತಿಮ ಯ ರೈ ಅವರು ಧನ್ಯವಾದ ಸಮರ್ಪಿಸಿದರು.ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ಭೋದಕರಾದ ಶ್ರೀ ಟಿ ಎಂ ಅಬೂಬಕರ್ ಅವರ ಮೇಲ್ವಿಚಾರಣೆಯಲ್ಲಿ ತರಬೇತಿಯು ಯಶಸ್ವಿಯಾಗಿ ನಡೆಯಿತು.

p>

LEAVE A REPLY

Please enter your comment!
Please enter your name here