ಬೆಳ್ತಂಗಡಿ: ಸಮಾಜಕ್ಕೆ ವಿಭಿನ್ನ ರಂಗಗಳಲ್ಲಿ ಸೇವೆಸಲ್ಲಿಸಿರುವ ಇತಿಹಾಸ ತಜ್ಞ ಹಾಗೂ ವಿಶ್ರಾಂತ ಪ್ರಾಧ್ಯಾಪಕ ಡಾ| ವೈ.ಉಮಾನಾಥ ಶೆಣೈಯವರಿಗೆ ಕುಡಾಲ ದೇಶಸ್ಥ ಆದ್ಯ ಗೌಡ ಬ್ರಾಹ್ಮಣ ಸಂಘ ದ.ಕ.ಜಿಲ್ಲೆ ಮಂಗಳೂರು ಇದರ ದಶಮಾನೋತ್ಸವ ಸಮಾರಂಭದಲ್ಲಿ ಸೇವಾದ್ರುಮ ಎಂಬ ಬಿರುದನ್ನಿತ್ತು ಗೌರವಿಸಲಾಯಿತು.ಆ ಸಮಾಜದ ಇತಿಹಾಸದ ಬಗ್ಗೆ ತಮಿಳುನಾಡಿನ ಚೆನೈಯಲ್ಲಿರುವ ತಮಿಳುನಾಡು ಪ್ರಾಚೀನ ಪತ್ರಗಾರದಲ್ಲಿ ಸಂಶೋಧನೆ ನಡೆಸಿ ಹಲವಾರು ವಿಚಾರಗಳನ್ನು ಬೆಳಕಿಗೆ ತಂದಿದ್ದರು. ಆ ಸಮಾಜದ ಹಿಂದಿನ ಅಗ್ರಗಣ್ಯ ಸಾಧಕರನ್ನು ಸಮಾಜಕ್ಕೆ ಪರಿಚಯಿಸಿದರು.1994 ರಿಂದ 2002 ರ ವರೆಗೆ ಮಹಾರಾಷ್ಟ್ರ ರಾಜ್ಯದಲ್ಲಿರುವ ಶ್ರೀ ದಾಭೋಲಿ ಮಠದ ವಿಷೇಶ ಆಹ್ವಾನಿತ ಟ್ರಸ್ಟಿಯಾಗಿ ಸೇವೆ ಸಲ್ಲಿಸಿ ಈ ಹಿಂದಿನ ಮಠಾಧೀಶ ಶ್ರೀ ಪ್ರದ್ಯುಮ್ನಾನಂದ ಸ್ವಾಮೀಜಿಯವರ ನಿಯುಕ್ತಿಯಲ್ಲಿಯೂ ವಿಶೇಷ ಪಾತ್ರ ವಹಿಸಿದ್ಧರು. ಮಾಳ್ ಗಾಂವ್ ಎಂಬಲ್ಲಿರುವ ಶ್ರೀ ಮಹಾಲಕ್ಷೀ ದೇವಾಲಯದ ಜೀರ್ಣೋದ್ಧಾರಕ್ಕೆ ಮಾರ್ಗದರ್ಶಕರಾಗಿದ್ದರು.ಸಮಾಜಕ್ಕೆ ನೀಡಿದ ಇಂತಹ ಸೇವೆಗಳನ್ನು ಪರಿಗಣಿಸಿ ನೀಡಲಾಗಿತ್ತು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕುಡಾಲ್ ಪ್ರಾಂತ್ಯದ ವಾಲಾವಲಿಯ ಶ್ರೀ ಲಕ್ಷೀ ನಾರಾಯಣ ದೇವಾಲಯದ ಅಧ್ಯಕ್ಷ ಶ್ರೀ ಸಂಗ್ರಾಮ್ ದೇಸಾಯಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ತಂತ್ರಿಗಳಾದ ಕುಂಟಾರು ರವೀಶ್ ತಂತ್ರಿ, ಮಂಗಳೂರಿನ ಖ್ಯಾತ ಪಿ.ಡಬ್ಲ್ಯೂ.ಡಿ. ಕಂಟ್ರಾಕ್ಟರ್ ಪ್ರವೀಣ್ ದರ್ಬೆ, ಕಡೆಕೋಡಿ ಶ್ರೀ ಲಕ್ಷೀ ವೆಂಕಟರಮಣ ದೇವಾಲಯದ ಪುನರ್ ನಿರ್ಮಾತೃ ಕಲ್ಲೆಗ ಸಂಜೀವ ನಾಯಕ್, ಮುಂಬೈಯ ಖ್ಯಾತ ಚಾರ್ಟೆಡ್ ಅಕೌಂಟೆಂಟ್ ಕುಮಾರಿ ಅಕ್ಷತಾ ಗೋಪಾಲ್ ನಾಯಕ್ ಮುಂತಾದವರು ಉಪಸ್ಥಿತರಿದ್ದರು.
ದಾಭೋಲಿ ಮಠದ ಪ್ರಸ್ತಾವಿತ ನೂತನ ಮಠಾಧೀಶರ ನಿಯುಕ್ತಿಯಲ್ಲಿಯೂ ಸಕ್ರಿಯವಾಗಿ ಭಾಗವಹಿಸುವ ಬಗ್ಗೆ ಚರ್ಚಿಸಲಾಯಿತು. ಶಾಲಾ ಕಾಲೇಜಿ ವಿದ್ಯಾರ್ಥಿಗಳಿಗೆ ಶಿಷ್ಯವೇತನವವಿತ್ತು ಗೌರವಿಸಲಾಯಿತು.
ಡಾ|ವೈ.ಉಮಾನಾಥ ಶೆಣೈಯವರಿಗೆ ‘ಸೇವಾದ್ರುಮ’ ಪ್ರಶಸ್ತಿಯೊಂದಿಗೆ ಸನ್ಮಾನ
p>