





ಆರಂಬೋಡಿ:ಮಗುವಿನ ಶೈಕ್ಷಣಿಕ ಬೆಳವಣಿಗೆಯಲ್ಲಿ ಹೆತ್ತವರ ಮತ್ತು ಶಿಕ್ಷಕರ ಸಮಾನ ಪಾತ್ರವಿದೆ. “ಪ್ರಾಥಮಿಕ ಶಿಕ್ಷಣ ಮಕ್ಕಳ ಭವಿಷ್ಯದ ಬುನಾದಿ” ಎಂದು ಆರಂಬೋಡಿ ಶಾಲಾ ಮುಖ್ಯ ಶಿಕ್ಷಕಿ ಸುಶೀಲ ನುಡಿದರು. ಅವರು ಮೇ 31 ರಂದು ಆರಂಬೋಡಿ ಶಾಲಾ ಪ್ರಾರಂಬೋತ್ಸವ ಸಮಾರಂಭದಲ್ಲಿ ಹೆತ್ತವರನ್ನು ಉದ್ದೇಶಿಸಿ ಮಾತನಾಡಿದರು.



ಎಸ್.ಡಿ.ಎಂ.ಸಿ ಅಧ್ಯಕ್ಷೆ ಯಶವಂತಿ, ಉಪಾಧ್ಯಕ್ಷ ಇಲ್ಯಾಸ್ ಉಚಿತ ಸಮವಸ್ತ್ರ, ಪಠ್ಯ ಪುಸ್ತಕ ಹಾಗೂ ಶಾಲಾ ಹಳೆ ವಿದ್ಯಾರ್ಥಿ ಮನೋಜ್ ಶೆಟ್ಟಿ ಪ್ರಾಯೋಜಕತ್ವದ ಪುಸ್ತಕಗಳನ್ನು ವಿತರಿಸಿ ಶುಭ ಹಾರೈಸಿದರು. ಶಿಕ್ಷಕಿ ವಿಜಯಲಕ್ಷ್ಮಿ ಸ್ವಾಗತಿಸಿದರು. ಶಿಕ್ಷಕಿ ಶಿವಾನಿ ವಂದಿಸಿದರು.








