ಚಿನ್ನದ ಪದಕ ವಿಜೇತ ಹಿರಿಯ ಕೆ ಎಸ್ ಆರ್ ಟಿ ಸಿ ಚಾಲಕ ಹೆಚ್ ಪಿ ರಾಜು ರವರಿಗೆ ಬೀಳ್ಕೊಡಗೆ- ಧರ್ಮಸ್ಥಳದಲ್ಲಿ ರಾಜಣ್ಣನೆಂದೇ ಚಿರಪರಿಚಿತ ಚಾಲಕ

0

ಧರ್ಮಸ್ಥಳ: ಧರ್ಮಸ್ಥಳ- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಧರ್ಮಸ್ಥಳ ಘಟಕದಲ್ಲಿ ಕಳೆದ ಮೂವತ್ತೇಳು ವರ್ಷಗಳಿಂದ ಚಾಲಕರಾಗಿ, ಹಿರಿಯ ಚಾಲಕರಾಗಿ, ತರಬೇತುಗೊಳಿಸುವ ಚಾಲಕ ಬೋಧಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚಿನ್ನದ ಪದಕ ವಿಜೇತರಾಗಿದ್ದ ರಾಜಣ್ಣ ಅಲಿಯಾಸ್ ಹೆಚ್ ಪಿ ರಾಜು ಮೇ 31ರಂದು ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ. ರಾಜಣ್ಣನಿಗೆ ಧರ್ಮಸ್ಥಳದಲ್ಲಿ ಭಾವನಾತ್ಮಕ ಬೀಳ್ಕೋಡುಗೆ.

ರಾಜಣ್ಣನವರ ಸೇವೆಯನ್ನು ನೆನಪಿಸಿ, ಅವರ ಸೇವೆಯನ್ನು ಗುರುತಿಸುವುದಕ್ಕಾಗಿ ಧರ್ಮಸ್ಥಳದಲ್ಲಿ ಇಂದು ಬೀಳ್ಕೋಡುಗೆ ಸಮಾರಂಭ ಏರ್ಪಡಿಸಲಾಯಿತು.ಧರ್ಮಸ್ಥಳ ಘಟಕದಲ್ಲಿ ಘಟಕದ ವ್ಯವಸ್ಥಾಪಕರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜಣ್ಣರನ್ನು ಸನ್ಮಾನಿಸಿ ಅವರ ಸೇವೆಯನ್ನು ಗುರುತಿಸಲಾಯಿತು.
ಸಮಾರಂಭದಲ್ಲಿ ಪುತ್ತೂರು ವಿಭಾಗ ವಿಭಾಗೀಯ ನಿಯಂತ್ರಾಣಾಧಿಕಾರಿ ಜಯಕರ ಶೆಟ್ಟಿ ಮತ್ತು ವಿಭಾಗ ಸಾರಿಗೆ ಅಧಿಕಾರಿಯಾದ ಮುರುಳೀಧರ ಆಚಾರ್ಯ, ಶ್ರೀಕ್ಷೇತ್ರ ಧರ್ಮಸ್ಥಳ ದೇವಳದ ನಿವೃತ್ತ ಮೆನೇಜರ್ ಹಾಗೂ ಬೆಳ್ತಂಗಡಿ ತಾಲೂಕು ಪಟ್ಲ ಪೌಂಡೇಷನ್ ನ ಭುಜಬಲಿಯವರು ಮತ್ತು ಘಟಕ ವ್ಯವಸ್ಥಾಪಕ ಎ ಉದಯಶೆಟ್ಟಿಯವರುಹಾಜರಿದ್ದು ರಾಜಣ್ಣನಿಗೆ ಸನ್ಮಾನಿಸಿದರು.

ಸಮಾರಂಭದಲ್ಲಿ ಮಾತನಾಡಿದ ರಾಜಣ್ಣ ತಮ್ಮ ಜೀವನದ ಯಶೋಗಾಥೆಯನ್ನು ಗುರುತಿಸಿದ್ದಕ್ಕೆ ಧನ್ಯವಾದ ತಿಳಿಸಿದರು. ಅಲ್ಲದೆ ಎಲ್ಲರೂ ಕೂಡ ಆದರ್ಶವಾಗ ಪ್ರೀತಿಯಿಂದ ಬದುಕುವಂತೆ ಕಿರಿಯ ಸಹೋದ್ಯೋಗಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ರಾಜಣ್ಣನವರ ಪತ್ನಿಸುಶೀಲ ರಾಜು ಮತ್ತು ಮಕ್ಕಳು,ಅಳಿಯಂದಿರು ಮತ್ತು ಮೊಮ್ಮಕ್ಕಳು ಭಾಗಿಯಾಗಿದ್ದರು.ಸಮಾರಂಭಕ್ಕೆ ಹಾಜರಾಗಿದ್ದ ನಿಗಮದ ನಿವೃತ್ತ ಸಹೋದ್ಯೋಗಿಗಳು ಮತ್ತು ರಾಜಣ್ಣನವರ ಸ್ನೇಹಿತರು ಆದ ಶ್ರೀ ವೆಂಕರಮಣ ಶೆಟ್ಟಿ, ಉಮೇಶ್ ರವರು ಗೌರವ ಸಮರ್ಪಣೆ ಮಾಡಿ ಅಭಿನಂದಿಸಿದರು.
ಧರ್ಮಸ್ಥಳ ಡಿಪೋ ಉದ್ಯೋಗಿಗಳಾದ ರುದ್ರೇಶ್, ಅಶೋಕ್ , ಚೆನ್ನಯ್ಯ ಕೂಡಿಗೆ, ಹೆಚ್ ಎಸ್ ರವಿಯವರು ಮಮತ್ತು ರಾಜಣ್ಣನವರ ಮಗಳಾದ ಶೃತಿಯವರು ಮಾತನಾಡಿ ರಾಜಣ್ಣನವರ ಬಗ್ಗೆ ಶುಭ ನುಡಿಗೈದರು. ಸಿಬ್ಬಂದಿ ಮೇಲ್ವಿಚಾರಕ ಹೆಚ್ ಎಸ್ ರವಿ ಕಾರ್ಯಕ್ರಮ ನಿರೂಪಣೆ ಮಾಡಿದರು.

LEAVE A REPLY

Please enter your comment!
Please enter your name here