ಆರಂಬೋಡಿ:ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಹೊಕ್ಕಾಡಿಗೋಳಿಯಲ್ಲಿ ಶಾಲಾ ಪ್ರಾರಂಭೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು.
ಶಾಲಾ ಎಸ್.ಡಿ.ಎಂ.ಸಿ ಯವರು, ಹಳೆವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹೊಸ ಮಕ್ಕಳನ್ನು ಬಲೂನ್ ಗಳನ್ನು ನೀಡಿ, ಆರತಿ ಬೆಳಗಿ ಶಾಲೆಗೆ ಸ್ವಾಗತಿಸಿದರು. ಸಾಲು ಹಣತೆಗಳನ್ನು ಹಚ್ಚಿ, ಮಗುವಿನ ಜೋಳಿಗೆ ತುಂಬಿಸುವ ಮೂಲಕ ವಿನೂತನವಾಗಿ ಶಾಲಾ ಪ್ರಾರಂಭೋತ್ಸವ ಆಚರಿಸಲಾಯಿತು.
ಉಚಿತ ಪಠ್ಯ ಪುಸ್ತಕ, ಶಾಲಾ ಸಮವಸ್ತ್ರ ವಿತರಿಸಲಾಯಿತು. ದಾನಿಗಳಾದ ಧನ್ಯಶ್ರೀ ಕೆ ಮನೋಜ್ ಶೆಟ್ಟಿ ಪ್ರಾಯೋಜಿತ ಉಚಿತ ನೋಟ್ ಪುಸ್ತಕಗಳನ್ನು ಮಕ್ಕಳಿಗೆ ವಿತರಿಸಲಾಯಿತು. ತಳಿರು ತೋರಣ, ರಂಗೋಲಿ ಗಳಿಂದ ಶಾಲೆಯನ್ನು ಅಲಂಕರಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಲಾಯಿತು.
ಗ್ರಾಮ ಪಂಚಾಯತ್ ಸದಸ್ಯರಾದ ಸುರೇಂದ್ರ ಅಜ್ಜಾಡಿ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಸದಾಶಿವ ಪೂಜಾರಿ, ಹಳೆವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾದ ರಾಘವೇಂದ್ರ ಭಟ್, ಅಧ್ಯಕ್ಷ ಸಂತೋಷ್ ಮಂಜಿಲ, ಪ್ರದೀಪ್ , ಶಾಲಾ ಮುಖ್ಯ ಶಿಕ್ಷಕರಾದ ಸುಮಿತ್ರಾ ಎಸ್, ಶಿಕ್ಷಕರು, ಪೋಷಕರು, ಹಳೆವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.