ಬೆಳ್ತಂಗಡಿ ತಾಲೂಕು ಕೊಕ್ಕಡ ಹೋಬಳಿ ಉರುವಾಲು ಗ್ರಾಮದ ಅಮ್ಟಂಗೆ ಎಂಬಲ್ಲಿ ಸಂದೇಶ್ ಬಿನ್ ಹರಿಯಪ್ಪ ಗೌಡ ಎಂಬವರು ಸರ್ವೇ ನಂಬ್ರ 126 (ಕಂದಾಯ) ಮತ್ತು 127 (ಅರಣ್ಯ)ರಲ್ಲಿ ಅರಣ್ಯ ಭೂಮಿಯನ್ನು ಕಬಳಿಸಿ ಬೆಲೆಬಾಳುವ ಮರಗಳನ್ನು ಬೇರು ಸಮೇತ ಕಡಿದು ಸಮತಟ್ಟುಗೊಳಿಸಿ ಅರಣ್ಯ ನಾಶಗೈಯುತ್ತಿದ್ದಾರೆ.ಈ ಬಗ್ಗೆ ಸ್ಥಳೀಯ ಅರಣ್ಯಾಧಿಕಾರಿಗಳು ಮತ್ತು ಕಂದಾಯ ಅಧಿಕಾರಿಗಳಿಗೆ ದೂರು ನೀಡಿದಾಗ ಅವರು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿರುತ್ತಾರೆ.
ಸಂದೇಶ ಎಂಬವರು ಈಗಾಗಲೇ ಸ.ನಂ 127 ಅರಣ್ಯ ಜಮೀನಿನಲ್ಲಿ ಈಗ ಮನೆ ಕಟ್ಟುತ್ತಿದ್ದು ಅದಕ್ಕೆ ಈಗಾಗಲೇ ಅಕ್ರಮವಾಗಿ 94 ಸಿ ಯೋಜನೆಯಡಿ ನಿವೇಶನ ಮಂಜೂರು ಮಾಡಿಕೊಂಡಿರುತ್ತಾರೆ.ಅಲ್ಲದೆ ಮೊಗ್ರು ಗ್ರಾಮದ ಮುಗೇರಡ್ಕ ಎಂಬಲ್ಲಿ ನೇತ್ರಾವತಿ ನದಿಯಲ್ಲಿ ಅಕ್ರಮವಾಗಿ ಮರಳು ದಂಧೆ ನಡೆಸಿ ಸರಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಉಂಟು ಮಾಡಿರುತ್ತಾರೆ.ಈ ಬಗ್ಗೆ ಈಗಾಗಲೇ ಗಣಿ ಇಲಾಖೆಗೆ ದೂರು ನೀಡಿದ್ದು ಅಕ್ರಮವಾಗಿ ಅರಣ್ಯ ಭೂಮಿಯನ್ನು ಕಬಳಿಸಿ ಮರಗಳನ್ನು ಕಡಿದು ಭೂಮಿಯನ್ನು ಸಮತಟ್ಟುಗೊಳಿಸುತ್ತಿದ್ದಾರೆ.
ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಶೇಖರ್ ಲಾಯಿಲ ಎಂಬವರು ಜಿಲ್ಲಾಧಿಕಾರಿಗಳಿಗೆ ಹಾಗೂ ಸಂಬಂದ ಪಟ್ಟ ಇಲಾಖೆಗೆ ದೂರು ನೀಡಿದ್ದಾರೆ.