


ಬೆಳಾಲು: ಇಲ್ಲಿಯ ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಮೇ 16 ರಂದು ಕ್ಷೇತ್ರದ ಅನುವಂಶಿಕ ಆಡಳಿತ ಮೊಕೇಸರ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ವೇದ ಮೂರ್ತಿ ನೀಲೇಶ್ವರ ಅಲಂಬಾಡಿ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಶ್ರೀ ಅನಂತ ಪದ್ಮನಾಭ ದೇವರ ಪ್ರತಿಷ್ಠಾ ವರ್ಧಂತ್ಯುತ್ಸವವ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು.

ಬೆಳಿಗ್ಗೆ ಗಣಪತಿ ಹೋಮ, ಶ್ರೀ ದೇವರ ಬಿಂಬ ಶುದ್ದಿ, ಪಂಚಾಮೃತ ಅಭಿಷೇಕ, ಮಹಾಪೂಜೆ, ಶ್ರೀ ನಾಗದೇವರಿಗೆ ಕಲಶಾಭಿಷೇಕ ಸಹಿತ ಪರ್ವ ತಂಬಿಲ, ಪರಿವಾರ ದೈವಗಳಿಗೆ ಕಲಶಾಭಿಷೇಕ, ಪರ್ವತಂಬಿಲ ನಡೆಯಿತು ರಾತ್ರಿ ಶ್ರೀ ದೇವರಿಗೆ ರಂಗಪೂಜೆ ಹಾಗೂ ಉತ್ಸವ ಬಲಿ, ಭಜನಾ ಮಂಡಳಿಯಿಂದ ಭಜನಾ ಸೇವೆ ನಡೆಯಿತು.

ಇದೇ ಸಂದರ್ಭದಲ್ಲಿ ದೇವಸ್ಥಾನದ 2022-2023ನೇ ಸಾಲಿನ ಖರ್ಚು ವೆಚ್ಚಗಳ ವಾರ್ಷಿಕ ಮಹಾಸಭೆ ನಡೆಯಿತು. ದೇವಸ್ಥಾನದ ಆಡಳಿತ ಮೊಕ್ತೇಸರ ಜೀವಂದರ ಜೈನ್ ಬೆಳಾಲು ಗುತ್ತು, ಆಸ್ರಣ್ಣ ಗಿರೀಶ್ ಬಾರಿತ್ತಾಯ,ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನೋಟರಿ ವಕೀಲ ಶ್ರೀನಿವಾಸ ಗೌಡ,ಪ್ರಧಾನ ಕಾರ್ಯದರ್ಶಿ ದುರ್ಗಾಪ್ರಸಾದ್ ಕೆರ್ಮುಣ್ಣಾಯ, ಉಪಾಧ್ಯಕ್ಷೆ ಮಮತಾ ದಿನೇಶ್ ಪೂಜಾರಿ, ಭಜನಾ ಮಂಡಳಿಯ ಕಾರ್ಯದರ್ಶಿ ಹರೀಶ್, ವಿವಿಧ ಸಮಿತಿಯ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಊರವರು ಉಪಸ್ಥಿತರಿದ್ದರು.


ಮಹಿಳಾ ಸಮಿತಿಯ ಗೌರವ ಅಧ್ಯಕ್ಷೆ ಗ್ರಾಮ ಪಂಚಾಯತ್ ಸದಸ್ಯೆ ವಿದ್ಯಾ ಶ್ರೀನಿವಾಸ ಗೌಡ ಸ್ವಾಗತಿಸಿ ವ್ಯವಸ್ಥಾಪನಾ ಸಮಿತಿಯ ಕಾರ್ಯದರ್ಶಿ ಸತೀಶ್ ಎಳ್ಳುಗದ್ದೆ ವಂದಿಸಿದರು.ದೇವಸ್ಥಾನದ ಮೆನೇಜರ್ ಶಿವಪ್ರಸಾದ್ ಕೆ. ನಿರೂಪಿಸಿದರು. ಮಧ್ಯಾಹ್ನ ಹಾಗೂ ರಾತ್ರಿ ಅನ್ನದಾನ ಸೇವಾಕರ್ತರಾಗಿ ಬೆಳಾಲು ವಿಶ್ವೇವೇಶಾನುಗ್ರಹದ ಲಲಿತ, ಶ್ರೀಮತಿ ಮತ್ತು ಶ್ರೀ ದುರ್ಗಾಪ್ರಸಾದ್ ಕೆರ್ಮುಣ್ಣಾಯ ಸಹಕರಿಸಿದರು