ಬೆಳ್ತಂಗಡಿ ಹೋಲಿ ರೆಡೀಮರ್ ಚರ್ಚ್ ಗೆ ನೂತನ ಧರ್ಮಗುರು ವ.ವಾಲ್ಟರ್ ಡಿ ಮೆಲ್ಲೋ

0

ಬೆಳ್ತಂಗಡಿ : ಬೆಳ್ತಂಗಡಿ ಹೊಲಿ ರೆಡೀಮರ್ ಚರ್ಚ್ ನ ನೂತನ ಧರ್ಮಗುರುಗಳಾಗಿ ವಂದನೀಯ ಫಾದರ್ ವಾಲ್ಟರ್ ಡಿ’ಮೆಲ್ಲೋ ಅಧಿಕಾರ ವಹಿಸಿಕೊಂಡರು.

ಮಂಗಳೂರು ಧರ್ಮಪ್ರಾಂತ್ಯದ ನ್ಯಾಯಾಂಗ ಧರ್ಮಾಧಿಕಾರಿಯಾಗಿ 6 ವರ್ಷ ಸೇವೆ ಸಲ್ಲಿಸಿನೂತನ ಧರ್ಮಗುರು ವಂದನೀಯ ಫಾದರ್ ವಾಲ್ಟರ್ ಡಿ’ಮೆಲ್ಲೊ ಅವರನ್ನು ಮೇ.16ರಂದು ಸ್ವಾಗತಿಸಿದರು.ಫಾದರ್ ಜೋಸೆಫ್ ಕಾರ್ಡೋಜ ವರ್ಗಾವಣೆ ಗೊಂಡ ಹಿನ್ನೆಲೆಯಲ್ಲಿ ಇಲ್ಲಿಗೆ ಇವರು ಆಗಮಿಸಿದ್ದಾರೆ.

ಈ ಸಂದರ್ಭದಲ್ಲಿ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ರೆ.ಫಾ. ಕ್ಲಿಫರ್ಡ್ ಪಿಂಟೋ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ವಾಲ್ಟರ್ ಮೋನಿಸ್, ಕಾರ್ಯದರ್ಶಿ ಗಿಲ್ಬರ್ಟ್ ಪಿಂಟೊ. ಪ್ಯಾರಿಷ್ ಪ್ಯಾಸ್ಟೋರಲ್ ಕಮಿಷನ್ಸ್ ಕೋ- ಆರ್ಡಿನೇಟರ್, ಶ್ರೀಮತಿ ಪಾಲಿನ್ ರೆಗೊ, ಶ್ರೀ ಜೆಸಿಂತಾ ಬರೆಟ್ಟೊ, ಸಂತ ತೆರೇಸಾ ಕಾನ್ವೆಂಟ್ ಧರ್ಮ ಭಗಿನಿ ಸಿ| ಜೆಸಿಂತ,ಫಾದರ್ ವಾಲ್ಟರ್ ಡಿ’ಮೆಲ್ಲೋ ಜೊತೆಯಲ್ಲಿ ಬೆಂದೂರ್ ಚರ್ಚ್ ಧರ್ಮಗುರು ರೆ.ಫಾ.ವಿನ್ಸೆಂಟ್ ಮೊಂತೇರೊ, ಮಾನ್ಸಿಜೋರ್ ಲೆಸ್ಲಿ ಶೆಣೈ, ರೆ.ಫಾ.ಅರುಣ್ ಲೋಬೋ, ರೆ.ಫಾ.ರಾನ್ಸನ್ ಪಿಂಟೊ, ರೆ.ಫಾ.ವಿವಿಯನ್ ರೋಡ್ರಿಗಸ್, ರೆ.ಫಾ.ನವೀನ್ ಪಿಂಟೊ, ರೆ.ಫಾ. ಫಾದರ್ ಆಲ್ಫ್ರೆಡ್ ಪಿಂಟೋ, ರೆ.ಫಾ.ಫ್ರಾನ್ಸಿಸ್ ಡಿಸೋಜಾ ಮತ್ತು ರೆ.ಫಾ.ಲಾರೆನ್ಸ್ ಡಿಸೋಜ. ಬಿಷಪ್ ನಿಯೋಜಿತ ಧರ್ಮ ಗುರು ರೆ.ಫಾ.ಬಾಸಿಲ್ ವಾಸ್ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ವಂದನೀಯ ಫಾ. ಪ್ರವೀಣ್ ಡಿಸೋಜ, ಥಾಮಸ್ ಸಿಕ್ವೇರಾ ಮತ್ತು ಹೆನ್ರಿ ಮಾಡ್ತಾ ಉಪಸ್ಥಿತರಿದ್ದರು. ಫಾದರ್ ಜೋಸೆಫ್ ಕಾರ್ಡೋಜಾ ಅವರು ಬೆಳವಾಯಿಯ ಮಾರ್ಟಿನ್ ಡಿ ಪೋರೆಸ್ ಚರ್ಚ್‌ನ ಪ್ಯಾರಿಷ್ ಪ್ರೀಸ್ಟ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇವರು 2020 ಆಗಸ್ಟ್ ರಿಂದ ಮೇ.15 , 2023 ರವರೆಗೆ ಬೆಳ್ತಂಗಡಿ ಚರ್ಚ್ ನಲ್ಲಿ ಸಲ್ಲಿಸಿದರು.

LEAVE A REPLY

Please enter your comment!
Please enter your name here