ಪೆರ್ಲ ಬೈಪಾಡಿ ಸರಕಾರಿ ಪ್ರೌಢಶಾಲೆಯಲ್ಲಿ ಕಳ್ಳತನಕ್ಕೆ ಯತ್ನ, ಚಾಮುಂಡಿ ಮಹಿಮೆಯಿಂದ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದ ಕಳ್ಳರು

0

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಪ್ರತಿಷ್ಠಿತ ಸರಕಾರಿ ಪ್ರೌಢ ಶಾಲೆಗಳಲ್ಲಿ ಪೆರ್ಲ ಬೈಪಾಡಿಯು ಒಂದು.1996 ರಲ್ಲಿ ಆರಂಭವಾದ ಈ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ರಜತ ಮಹೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.

ಬೆಳ್ತಂಗಡಿ ತಾಲೂಕಿನ ಶಾಸಕರ ಅನುದಾನ ರೂಪಾಯಿ 28 ಲಕ್ಷದಿಂದ ಶಾಲೆಯ ಬಹುತೇಕ ಭೌತಿಕ ಸೌಲಭ್ಯಗಳನ್ನು ಈಡೇರಿ ಸಿಕೊಳ್ಳಲಾಯಿತು.ಶಾಲೆಯು ಇದುವರೆಗೆ 8 ಸಲ ಶೇಕಡಾ 100 ಫಲಿತಾಂಶ ದಾಖಲಿಸಿರುತ್ತದೆ. ಕಳೆದ ಕೆಲವು ತಿಂಗಳುಗಳಿಂದ ಪುತ್ತೂರು ತಾಲೂಕಿನ ವಳಾಲು, ಬೆಳ್ತಂಗಡಿ ತಾಲೂಕಿನ ಬುಳೇರಿ , ಪದ್ಮುಂಜ, ಕೊಕ್ಕಡ ಪ್ರೌಢ ಶಾಲೆಗಳಲ್ಲಿ ಬ್ಯಾಟರಿ ಕಳ್ಳತನ ಮಾಡಿರುವುದನ್ನು ಮಾಧ್ಯಮ ಗಳಿಂದ ತಿಳಿದು ಕೊಳ್ಳಲಾಯಿತು. ಕೊಯ್ಯೂರಿನ ಸೇವಾ ಸಹಕಾರಿ ಬ್ಯಾಂಕಿನ ಜನರೇಟರ್ ಬ್ಯಾಟರಿಯೂ ಕಳ್ಳತನ ವಾಗಿತ್ತು. ಹೀಗೆ ಬಂದ ಕಳ್ಳರಿಗೆ ಪೆರ್ಲ ಬೈಪಾಡಿ ಶಾಲೆಯು ಕೂಡ ಕಳ್ಳತನದ ಲಿಸ್ಟಲ್ಲಿ ಇದ್ದಿರಬೇಕು. ಹಾಗಾಗಿ ಶಾಲೆ ರಜೆ ಸಿಕ್ಕಿದ ಕೂಡಲೇ ಅಂದರೆ ಏಪ್ರಿಲ್ 11 ಅಥವ 12 ರಂದು ಕಳ್ಳತನಕ್ಕೆ ವಿಫಲ ಪ್ರಯತ್ನ ನಡೆಸಲಾಗಿತ್ತು. ನಡೆಸಲಾಗಿತ್ತು. ದಿನಾಂಕ 13 ರಂದು 10ನೇ ತರಗತಿಯ‌ 20 ವಿದ್ಯಾರ್ಥಿಗಳು ರಿವಿಜನ್ ಪಡೆಯಲು ಬಂದಾಗ ಶಿಕ್ಷಕರು ಮತ್ತು ಮುಖ್ಯೋಪಾಧ್ಯಾರಿಗೆ ಈ ಅಂಶಗಳು ಬೆಳಕಿಗೆ ಬಂದಿವೆ. ಅಂದೇ ಧರ್ಮಸ್ಥಳ ಆರಕ್ಷಕ ಠಾಣೆಗೆ ದೂರು ನೀಡಲಾಯಿತು. ಮರು ದಿನ ಏಪ್ರಿಲ್ 14 ಅಂಬೇಡ್ಕರ್ ಜಯಂತಿ ಕಾರಣ ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಶಾಲೆಗೆ ಬಂದಿದ್ದು ಕಳ್ಳರು ಕಳ್ಳತನಕ್ಕೆ ಪ್ರಯತ್ನಿಸಿದ ಬಗ್ಗೆ ಶಿಕ್ಷಕರೆಲ್ಲರು ಚರ್ಚಿಸಿ , ಶಾಲಾ ವತಿಯಿಂದಲೇ ಆರಾಧಿಸಿಕೊಂಡು ಬರುತ್ತಿರುವ ಮುಖ್ಯ ದೈವ ಚಾಮುಂಡಿ, ಪರಿವಾರ ದೈವಗಳಾದ ಗುಳಿಗ , ಬೈರವ ದೈವಗಳಲ್ಲಿ ಸಾಮೂಹಿಕವಾಗಿ ಪ್ರಾರ್ಥಿಸಿಕೊಳ್ಳಲಾಯಿತು. ಕಳ್ಳತನಕ್ಕೆ ಪ್ರಯತ್ನಿಸಿದ ಕಳ್ಳರು ಇನ್ನು ಮುಂದೆ ಪ್ರಯತ್ನಿಸಿದರೆ 15 ದಿನಗಳೊಳಗೆ ಸತ್ಯ ತಿಳಿಯಬೇಕು ಎಂಬುದಾಗಿ ದೇವಿಯಲ್ಲಿ ಪ್ರಾರ್ಥಿಸಿಂತೆ ದೇವಿ ಕಣ್ಣು ತೆರೆದು ಕಳ್ಳರನ್ನು ಊರವರೆ ಹಿಡಿದು ಧರ್ಮಸ್ಥಳ ಪೋಲಿಸರಿಗೆ ಒಪ್ಪಿಸಿದರು.

ಏಪ್ರಿಲ್ 14 ರಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.ಏಪ್ರಿಲ್ 30, ರಾತ್ರಿ 1.30 ರಂದು ಕಳ್ಳರು ಕಳ್ಳತನಕ್ಕೆ ಪ್ರಯತ್ನಿಸಿದ ಸಂದರ್ಭದಲ್ಲಿ ಊರವರ ಸಮಯ ಪ್ರಜ್ಞೆಯಿಂದ , ಕೇವಲ ಹದಿನಾರೇ ದಿನಗಳಲ್ಲಿ ಕಳ್ಳರು ಸಿಕ್ಕಬಿದ್ದಿರುವುದು, ದೇವಿ ಚಾಮುಂಡೇಶ್ವರಿ ಕಾಯುತ್ತಾಳೆ ಎಂಬುದನ್ನು ದೃಢಪಡಿಸಿದ್ದಾಳೆ.

p>

LEAVE A REPLY

Please enter your comment!
Please enter your name here