ಮಚ್ಚಿನ: ಮಾನ್ಯ ಸತ್ಯಚಾವಡಿ ಕೋಟ್ಯಾನ್ ಬರಿಯ ತರವಾಡು ಮನೆಯ ಗೃಹಪ್ರವೇಶ ಹಾಗೂ ಧರ್ಮ ದೈವಗಳ ಪುನಃರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಅಂಗವಾಗಿ ಮೇ 2 ರಂದು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಜಗದ್ಗುರು ಶ್ರೀ ಶಂಕರಾಚಾರ್ಯ ಅವರು ಆಶೀರ್ವಚನ ನೀಡುತ್ತಾ ಸತ್ಯಚಾವಡಿ ಮನೆ ಮಾನ್ಯ ಧರ್ಮ ದೈವಗಳ ಪ್ರತಿಷ್ಠಾಪನೆ ಅತ್ಯಂತ ಸಂತೃಪ್ತಿಯನ್ನು ನೀಡಿದೆ ಇದರಿಂದ ಕುಟುಂಬದಲ್ಲಿ ಐಕ್ಯತೆ ಮೂಡಲಿ ಹಾಗೂ ನೆಮ್ಮದಿಯ ಜೀವನದೊಂದಿಗೆ ಕುಟುಂಬದ ಅಭಿವೃದ್ಧಿಯಾಗಲಿ ಎಂದು ಹರಸಿದರು.ಸತ್ಯಚಾವಡಿ ಮಾನ್ಯ ಕುಟುಂಬದವರು ವ್ಯವಸ್ಥೆಯನ್ನು ಗೌರವಿಸಿ ಹಾಗೂ ಕುಟುಂಬದ ಎಲ್ಲಾ ಸದಸ್ಯರಿಗೆ ಅಕ್ಷತೆ ಹಾಕಿ ಆಶೀರ್ವಚನ ನೀಡಿದರು.
ಪ್ರಧಾನ ಕರ್ಮಿ, ಶ್ರೀ ಮಂತ್ರಮೂರ್ತಿ ಗುಳಿಗ ಸನ್ನಿಧಿ ಉಪ್ಲೇರಿಯ ಗೋಪಾಲಕೃಷ್ಣ ವಾಂತಿಜಾಲು ಧಾರ್ಮಿಕ ಭಾಷಣದಲ್ಲಿ ಮಾತನಾಡಿ ನಮ್ಮ ಸಂಸ್ಕೃತಿ,ಪರಪಂರೆ, ಆಚಾರ ವಿಚಾರಣೆಗಳನ್ನು ನಾವು ಜೀವನದಲ್ಲಿ ರೂಢಿಸಿಕೊಳ್ಳಬೇಕು, ಆಡಂಭರದ ಆಚರಾಣೆಗೆ ನಾವು ಬಲಿಯಾಗಬಾರದು,ನಮ್ಮ ಮನಸ್ಸು ಮುಕ್ತವಾಗಿರಬೇಕು ಮತ್ತು ನಾವು ಮತ್ಸರವನ್ನು ತ್ಯಜಿಸಿಬೇಕು ಎಂದು ಹೇಳಿದರು.
ಮಾನ್ಯ ಕುಟುಂಬದವರು ಭಾಗ್ಯವಂತರು, ದೈವಗಳು ನಮ್ಮ ಜೀವನದಲ್ಲಿ ಬದಲಾವಣೆ ತರಲು ಸಾಧ್ಯ ಅದು ನಮ್ಮ ಸ್ರದ್ದಾಭಕ್ತಿಯಿಂದ ಮಾತ್ರ ಸಾಧ್ಯ. ದೈವ ಧೂಮಾವತಿಗೆ ನಮಗೆ ಬರುವ ಕಷ್ಟಗಳನ್ನು ದೂರ ಮಾಡಲು ಸಾಧ್ಯವಿದೆ ಆದರೆ ನಮ್ಮ ಭಕ್ತಿಯೇ ಇದಕ್ಕೆ ಮೂಲ ಕಾರಣ ಎಂದು ತಿಳಿಸಿದರು, ಸಮಯ ಧಾರಿತ್ರಿಯದವಳು ಹೆತ್ತತಾಯಿ ಮತ್ತು ತಾಯಿ ಸಂಬಂಧ ಬಗ್ಗೆ ತಿಳಿಸಿದರು.
ಜೋತಿಷ್ಯ ತಿರುಕ ಶ್ರೀ ಶಶಿಧರನ್ ಮಾಂಗಡ್ ಮಾತಾನಾಡಿ ಮಾನ್ಯ ಸತ್ಯಚಾವಡಿ ಕೋಟ್ಯಾನ್ ಬರಿಯ ತರವಾಡು ಮನೆಯಲ್ಲಿ ಮಹಾಶಕ್ತಿಗಳೊಗೊಂಡ ಪವಿತ್ರ ಸಾನಿಧ್ಯಗಳಿವೆ, ಶ್ರದ್ದೆಯಿಂದ ಕೆಲಸಕಾರ್ಯಗಳು ನಡೆಸಿದ ತರವಾಡುವೆಂದರೆ ಮಾನ್ಯ ಸತ್ಯಚಾವಡಿ ಕೋಟ್ಯಾನ್ ಬರಿಯ ತರವಾಡು ಮನೆ ಎಂದರು.
ಸ್ಥಾಪಕಾಧ್ಯಕ್ಷರು, ಜಿಲ್ಲಾ ಜನಜಾಗೃತಿ ವೇದಿಕೆ ಬೆಳ್ತಂಗಡಿಯ ವಸಂತ ಸಾಲ್ಯಾನ್ ಕಾಪಿನಡ್ಕ ಮಾತನಾಡಿ ಮಾನ್ಯ ಕುಟುಂಬದವರು ನಿರ್ಮಿಸಿದ ಈ ತರವಾಡು ಮನೆಯು ಪ್ರಸಿದ್ಧಿಯನ್ನು ಪಡೆಯಲಿ, ಅಳಿಯ ಕಟ್ಟು ಕುಟುಂಬದವರು ಈ ರೀತಿ ವ್ಯವಸ್ಥೆಯನ್ನು ಮಾಡಿದ್ದು ನಾನು ಕಂಡಿಲ್ಲ ಈ ಕುಟುಂಬಸ್ಥರು ಕೆಲಸಕಾರ್ಯಗಳು ಎಲ್ಲರಿಗೂ ಮಾದರಿಯಾಗಲಿ ಎಂದು ನುಡಿದರು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಕರ್ನಾಟಕ ಸರಕಾರದ ನಿರ್ದೇಶಕರು ಕೆ.ಟಿ.ಸುವರ್ಣ ಮಾತನಾಡಿ ಈ ಸ್ಥಳ ತುಂಬಾ ಶಕ್ತಿಯುತವಾಗಿದೆ, ಮಾನ್ಯ ಕುಟುಂಬದವರು ಈ ಕೆಲಸ ಕಾರ್ಯಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮೃತ್ಯುಂಜಯ ದೇವಸ್ಥಾನ ರುದ್ರಗಿರಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಭಾಕರ ಗೌಡ ಪೊಸಂದೋಡಿ ಮಾತನಾಡಿ ಮುಂದಿನ ದಿನಗಳಲ್ಲಿ ಈ ಕ್ಷೇತ್ರವು ಧಾರ್ಮಿಕ ಕ್ಷೇತ್ರವಾಗಿ ಹೊರಹೊಮ್ಮುತ್ತದೆ, ಮಾನ್ಯ ಕುಟುಂಬದವರು ಈ ಕೆಲಸ ಕಾರ್ಯಗಳ ಸಾಧನೆ ಎಲ್ಲಾರಿಗೂ ಮಾದರಿ ಎಂದು ಹೇಳಿದರು.
ರಾಜೇಶ್ ಇರಿಯಾ, ಪ್ರಸಾದ್ ಗೌದಿಯಡ್ಕ, ಕುಟುಂಬದ ಹಿರಿಯ ಮುಖಂಡ ಸಂಜೀವ ಪೂಜಾರಿ ಮಾನ್ಯ, ಗೌರವಾಧ್ಯಕ್ಷ, ಆಡಳಿತ ಮಂಡಳಿ ದಿನಕರ ಪೂಜಾರಿ ಕಡ್ತಿಲ , ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಭೋಜ ಬಂಗೇರ ಮಾನ್ಯ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಸಿ.ಹೆಚ್.ಚಿಪ್ಲುಕೋಟೆ, ಪ್ರಧಾನ ಸಂಚಾಲಕ ಬ್ರಹ್ಮಕಲಶೋತ್ಸವ ಸಮಿತಿ ಯೋಗೀಶ್ ಪೂಜಾರಿ ಕಡ್ತಿಲ, ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ವಿನಯಚಂದ್ರ ಜೆಂಕ್ಯಾರು, ಪ್ರಧಾನ ಕಾರ್ಯದರ್ಶಿ ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ದಾರ ಸಮಿತಿ ಪ್ರಸಾದ್ ಪೂಜಾರಿ ಕಡ್ತಿಲ , ಮಹಾ ಪೋಷಕರು ಪವಿತ್ರ ಕೋಟ್ಯಾನ್ ನೇರೆದಿದ್ದರು. ಕೋಶಾಧಿಕಾರಿ ಪೂರ್ಣಿಮಾ ಕೋಟ್ಯಾನ್ ಪ್ರಾರ್ಥಿಸಿ, ರಾಜೇಶ್ ಕೋಟ್ಯಾನ್ ಸ್ವಾಗತಿಸಿದರು. ಜೀರ್ಣೋದ್ದಾರ ಸಮಿತಿಯ ಕಾರ್ಯದರ್ಶಿ ಮಹೇಶ್ ಕೊಟ್ಯಾನ್ ಜೆಂಕ್ಯಾರ್ ವಂದಿಸಿದರು. ಸ್ಮಿತೇಶ್ ಬಾರ್ಯ ನಿರೂಪಿಸಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಯಮುನಾ ಜನಾರ್ದನ ಪೂಜಾರಿ ಕಡ್ತಿಲ ದಂಪತಿಗಳನ್ನು ಸನ್ಮಾನಿಸಲಾಯಿತು.
ಬಳಿಕ ರವೀಂದ್ರ ಕನ್ನಡಿಕಟ್ಟೆ ಬಳಗದಿಂದ ಯಕ್ಷಗಾನ ನಾಟ್ಯ ವೈಬವ ನಡೆಯಿತು ಮಾನ್ಯ ಕುಟುಂಬದ ಸದಸ್ಯರಾದ ಸ್ವಾತಿ ಎಂ ಪೂಜಾರಿ ಮತ್ತು ಶ್ರೇಯ ಅಭಿನಯಿಸಿದರು.ಕುಟುಂಬದ ಸದಸ್ಯರು, ಸ್ಥಳೀಯರು ನೇರೆದಿದ್ದರು.