



ಬೆಳ್ತಂಗಡಿ: ಅಭಿವೃದ್ಧಿ ಹೆಸರಿನಲ್ಲಿ ಪ್ರತಿಯೊಂದು ಕಾಮಗಾರಿಗಳಲ್ಲೂ ಭ್ರಷ್ಟಾಚಾರ ನಡೆದಿದೆ. ತಾಲೂಕಿನಲ್ಲಿ ಮಿತಿ ಮೀರಿ ಟಿಂಬರ್ ಮಾಫಿಯಾ, ಅಕ್ರಮ ಮರಳು ಗಣಿಗಾರಿಕೆಯಿಂದ ರಾಜ್ಯದಲ್ಲೇ ಕೆಟ್ಟ ಹೆಸರು ಪಡೆದಿದೆ. ನೇತ್ರಾವತಿಯ ಒಡಲನ್ನೇ ಬಗೆದು ತಿನ್ನುತ್ತಿದ್ದಾರೆ. ತಾಲೂಕಿನಲ್ಲಿ ಕುಡಿಯುವ ನೀರಿಗೂ ಅಭಾವ ಬಂದಿರುವುದಕ್ಕೆ ಅಕ್ರಮ ಮರಳುಗಣಿಗಾರಿಕಯೇ ಕಾರಣ ಎಂದು ವಾಗ್ದಾಳಿ ನಡೆಸಿದ್ರು.
ಈ ಬಾರಿ ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಬೇಕಾದ್ರೆ ಕಾಂಗ್ರೆಸ್ ಪಕ್ಷವನ್ನ ಗೆಲ್ಲಿಸಿ. ತಾಲೂಕಿನ ಅಭಿವೃದ್ಧಿಯಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ, ಸ್ವಜನಪಕ್ಷಪಾತಕ್ಕೆ ಒಳಗಾಗುವುದಿಲ್ಲ ಎಂದು ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಭರವಸೆ ನೀಡಿದರು.


ವಿಧಾನಸಭಾ ಕ್ಷೇತ್ರದ ಬೈಪಾಡಿ, ಪದ್ಮುಂಜ, ಬಾರ್ಯ, ತೆಕ್ಕಾರು, ಇಳಂತಿಲ ಮತ್ತು ಕರಾಯ ಸೇರಿದಂತೆ ಹಲವು ಕಡೆ ಮಾಜಿ ಶಾಸಕ ವಸಂತ ಬಂಗೇರ ಅವರೊಟ್ಟಿಗೆ ಬಿರುಸಿನ ಪ್ರಚಾರ ನಡೆಸಿದರು. ಇದೇ ವೇಳೆ ಮಾತನಾಡಿದ ಮಾಜಿ ಶಾಸಕ ವಸಂತ ಬಂಗೇರ ಅವರು, ಬೆಳ್ತಂಗಡಿಯ ಶಾಸಕರಿಗೆ ಕಮಿಷನ್ ಮಾತ್ರ ತಲೆಯಲ್ಲಿದೆ, ಅಭಿವೃದ್ಧಿಯಲ್ಲ.ಬಡವರಿಗೆ ನೀಡುವ ಅಕ್ರಮ-ಸಕ್ರಮದ ಹಕ್ಕುಪತ್ರದಲ್ಲೂ ಮಧ್ಯವರ್ತಿಗಳಿಂದ ವಸೂಲಿ ಮಾಡಿದ್ದಾರೆ. ಈ ಬಾರಿ ಇಂತಹ ಕಮಿಷನ್ ಶಾಸಕನನ್ನು ಸೋಲಿಸಬೇಕೆಂದು ಕರೆ ನೀಡಿದರು
ಪ್ರಚಾರ ಸಭೆಯಲ್ಲಿ ರಕ್ಷಿತ್ ಶಿವರಾಂ ಪರ ಮತಯಾಚಿಸಿದ ಶ್ರೀ ಕ್ಷೇತ್ರ ಕುದ್ರೋಳಿ ಕೋಶಾಧಿಕಾರಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ರಾಮಯ್ಯ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರುವುದು ನಿಶ್ಚಿತ. ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳು, ಐದು ಗ್ಯಾರೆಂಟಿಗಳ ಜನ ಸಾಮಾನ್ಯಾರ ಪರವಾಗಿದೆ ಅಂದರು ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶಾಹಲ್ ಹಮೀದ್ ,ಪಕ್ಷದ ಪ್ರಮುಖರಾದ ಜಯವಿಕ್ರಮ್ ,ಹರೀಶ್ ಗೌಡ, ಉಮವಾತಿ ಗೌಡ,ಅಭ್ಥುಲ್ ರಝಕ್ ತೆಕ್ಕಾರು,ಅಯುಬ್ ಡಿ.ಕೆ, ಈಶ್ವರ ಭಟ್ ಮಾಯ್ತಿಲೋಡಿ,ಶ್ರೀಮತಿ ಉಷ ಶರತ್ ,ಮನೋಹರ್ ಇಳಂತಿಲ ಹಾಗೂ ಪ್ರಮುಖರು ಉಪಸ್ಥಿತರಿದ್ದರು.


            





