


ಬೆಳ್ತಂಗಡಿ: ಮಚ್ಚಿನ ಗ್ರಾಮದ ಮಾನ್ಯ ಸತ್ಯಚಾವಡಿ ಮನೆ ಕೋಟ್ಯಾನ್ ಬರಿಯ ತರವಾಡು ಮನೆಯ ಗೃಹ ಪ್ರವೇಶ, ಧರ್ಮ ದೈವ ಶ್ರೀ ಧೂಮಾವತಿ, ಬಂಟ ಪರಿವಾರ ದೈವಗಳ ಮತ್ತು ಸ್ಥಳ ದೇವತಾ ಸಾನಿಧ್ಯಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಎ.30 ರಿಂದ ಮೇ 3 ರವರೆಗೆ ನಡೆಯಲಿದೆ ಎಂದು ಆಡಳಿತ ಸಮಿತಿಯ ಅಧ್ಯಕ್ಷ ಜನಾರ್ದನ ಪೂಜಾರಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಸಿ. ಹೆಚ್. ಚಿಪ್ಲಲುಕೋಟೆ ಹೇಳಿದರು.ಅವರು ಎ.25 ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಂಕೀರ್ಣದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ವಿನೂತನ ವಾಸ್ತುಶಿಲ್ಪ ಶಾಸ್ತ್ರ ಅನುಸಾರದೊಂದಿಗೆ ನಿರ್ಮಿಸಲ್ಪಟ್ಟ ತರವಾಡು ಮನೆಯ ಗೃಹ ಪ್ರವೇಶ ಮತ್ತು ಕುಟುಂಬದ ದೈವಗಳಾದ ಧರ್ಮ ದೈವ ಶ್ರೀ ಧೂಮಾವತಿ, ಬಂಟ, ಕುಪ್ಪೆ ಪಂಜುರ್ಲಿ, ವರ್ಣರ ಪಂಜುರ್ಲಿ, ಕೊರತಿಅಮ್ಮ, ಕಲ್ಕುಡ, ಕಲ್ಲುರ್ಟಿ, ಮುಕಾಂಬಿಕಾ ಗುಳಿಗ, ಕಲ್ಲಾಲ್ತ ಗುಳಿಗ, ಆದಿಗುರು, ಕುಂಟಲ್ತಾಯ, ಮುಡಿಪು ಮತ್ತು ಸ್ಥಳ ದೇವತಾ ಸಾನಿಧ್ಯಗಳ ಮಹಾಕಾಳಿ, ರಕ್ತೇಶ್ವರಿ, ಬಂಟ ಗುಳಿಗ, ಕೊಡಮಣಿತ್ತಾಯ, ಮಹಿಷಂದಾಯ, ಕ್ಷೇತ್ರಪಾಲ, ಕೊರಗಜ್ಜ, ಮಾಳದ ಕೊರವ, ಮಾಳದ ಕೊರತಿ ಇವುಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಜರಗಲಿದೆ.ತರವಾಡು ಮನೆಯ ನಿರ್ಮಾಣ,ಎಲ್ಲಾ ದೈವಗಳ ಗುಡಿಗಳ ನಿರ್ಮಾಣ,ಜೀರ್ಣೋದ್ದಾರ ನಡೆದಿದೆ. ಮೇ 1 ರಂದು ಹಸಿರುವಾಣಿ ಮತ್ತು ದೈವಗಳ ಮೊಗ ಮುರ್ತಿಯ ಭವ್ಯ ಮೆರವಣಿಗೆ ಬಳಿಕ ಉಗ್ರಾಣ ಮುಹೂರ್ತ, ಕಾರ್ಯಲಯ ಉದ್ಘಾಟನೆ ನಡೆಯಲಿದೆ ಮೇ 3 ರಂದು ಗೃಹ ಪ್ರವೇಶ,ದೈವಗಳ ಪ್ರತಿಷ್ಠೆ,ಕಲಶಾಭಿಷೇಕ ಪ್ರತಿ ದಿನ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಭೋಜ ಬಂಗೇರ ಮಾನ್ಯ, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಸಂಚಾಲಕ ಯೋಗೀಶ್ ಪೂಜಾರಿ ಕಡ್ತಿಲ, ಆಡಳಿತ ಸಮಿತಿ, ಜೀರ್ಣೋದ್ದಾರ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ ಯ ಕೋಶಾಧಿಕಾರಿ ಪೂರ್ಣಿಮಾ ಕೋಟ್ಯಾನ್, ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿನಯಚಂದ್ರ, ಜೀರ್ಣೋದ್ದಾರ ಸಮಿತಿಯ ಕಾರ್ಯದರ್ಶಿ ಮಹೇಶ್ ಜೇಂಕಿಯಾರ್, ಜೀರ್ಣೋದ್ದಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಪೂಜಾರಿ ಕಡ್ತಿಲ, ಪ್ರಚಾರ ಸಮಿತಿ ಸಂಚಾಲಕ ದಯಾನಂದ ಕಿಲ್ಲೂರು ಉಪಸ್ಥಿತರಿದ್ದರು