


ವೇಣೂರು, ಎ. 25: ಇತಿಹಾಸ ಪ್ರಸಿದ್ಧ ಅಜಿಲಸೀಮೆಗೆ ಒಳಪಟ್ಟ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇಂದು ಶ್ರೀ ಭದ್ರಕಾಳಿ ದೇವಿಯ ಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ಚಂಡಿಕಾಯಾಗ ಮತ್ತು ೧೦೦೮ ಹೂವಿನಪೂಜೆ ನಡೆಯಿತು.
ತಂತ್ರಿವರ್ಯರಾದ ಶ್ರೀಪಾದ ಪಾಂಗಣ್ಣಾಯರು ಮತ್ತು ದೇಗುಲದ ಪ್ರಧಾನ ಅರ್ಚಕರಾದ ವಿಷ್ಣುಮೂರ್ತಿ ಭಟ್‌ರವರ ಪೌರೋಹಿತ್ಯದಲ್ಲಿ ನಡೆದ ಧಾರ್ಮಿಕ ವಿಧಾನಗಳು ಜರಗಿದವು.
ದೇವಸ್ಥಾನದ ವಿವಿಧ ಸಮಿತಿ ಪದಾಧಿಕಾರಿಗಳು, ಸದಸ್ಯರು ಹಾಗೂ ಭಕ್ತಾದಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.