


ಮಚ್ಚಿನ: ಇಲ್ಲಿಯ ಮಾನ್ಯ ಸತ್ಯಚಾವಡಿ ಮನೆ ಕೋಟ್ಯಾನ್ ಬರಿಯ ತರವಾಡು ಮನೆಯ ಗೃಹ ಪ್ರವೇಶ, ಧರ್ಮ ದೈವ ಶ್ರೀ ಧೂಮಾವತಿ, ಬಂಟ ಪರಿವಾರ ದೈವಗಳ ಮತ್ತು ಸ್ಥಳ ದೇವತಾ ಸಾನಿಧ್ಯಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಎ.30 ರಿಂದ ಮೇ.3 ರವರೆಗೆ ನಡೆಯಲಿದೆ.ಇದರ ಅಂಗವಾಗಿ ಚಪ್ಪರ ಮುಹೂರ್ತ ಎ.20 ರಂದು ನಡೆಯಿತು.

ಈ ಸಂದರ್ಭದಲ್ಲಿ ಆಡಳಿತ ಸಮಿತಿ ಅಧ್ಯಕ್ಷ ಜನಾರ್ದನ ಪೂಜಾರಿ ಕಡ್ತಿಲ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಭೋಜ ಬಂಗೇರ ಮಾನ್ಯ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಸಿ. ಎಚ್. ಚಿಪ್ಳುಕೋಟೆ,ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಸಂಚಾಲಕ ಯೋಗೀಶ್ ಪೂಜಾರಿ ಕಡ್ತಿಲ, ಕುಟುಂಬದ ಹಿರಿಯರಾದ ಸಂಜೀವ ಪೂಜಾರಿ ಮಾನ್ಯ, ಆಡಳಿತ ಸಮಿತಿ, ಜೀರ್ಣೋದ್ದಾರ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ ಯ ಕೋಶಾಧಿಕಾರಿ ಪೂರ್ಣಿಮಾ ಕೋಟ್ಯಾನ್, ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿನಯಚಂದ್ರ, ಜೀರ್ಣೋದ್ದಾರ ಸಮಿತಿಯ ಕಾರ್ಯದರ್ಶಿ ಮಹೇಶ್ ಜೇಂಕಿಯಾರ್, ಜೀರ್ಣೋದ್ದಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಪೂಜಾರಿ ಕಡ್ತಿಲ, ಪ್ರಚಾರ ಸಮಿತಿ ಸಂಚಾಲಕ ದಯಾನಂದ, ಗೋಪಾಲ ಪೂಜಾರಿ ಕರ್ಬಡ್ಕ, ಸ್ಥಳೀಯರಾದ ಶೀನಪ್ಪ ಗೌಡ, ವಿವಿಧ ಸಮಿತಿಯ ಸದಸ್ಯರು, ಕುಟುಂಬದ ಸದಸ್ಯರು ಹಾಜರಿದ್ದರು. ಬಳಿಕ ಬ್ರಹ್ಮಕಲದ ಕುರಿತು ಸಮಿತಿಯ ಸಮಾಲೋಚನಾ ಸಭೆ ನಡೆಯಿತು.