


ಬೆಳ್ತಂಗಡಿ : ಲಾಯಿಲ ಗ್ರಾಮದ ಗಾಂಧಿನಗರ ಎಂಬಲ್ಲಿ 2018-19 ನೇ ಸಾಲಿನಲ್ಲಿ ನೆರೆಯಿಂದ 7 ಕುಟುಂಬ ಸಂತ್ರಸ್ತರಾಗಿದ್ದು, ಪ್ರತಿ ವರ್ಷ ಮಳೆಗಾಲದಲ್ಲಿ ನೆರೆ ಸಮಸ್ಯೆಗೆ ಒಳಗಾಗುತ್ತಿದ್ದು ಸದ್ರಿ 7 ಕುಟುಂಬಗಳಿಗೆ ಸ್ಥಳಾಂತರಿಸಿ ಸ.ನಂ.287/1 ಎಂ1ರ ಡಿ ಸಿ ಮನ್ನಾ ಭೂಮಿಯಲ್ಲಿ ಹಿಂದಿನ ತಹಸೀಲ್ದಾರ್ ಸರಕಾರದಿಂದ ಮಂಜೂರುರಾದ ತಲಾ 0.06 ಸೆಂಟ್ಸ್ ನಂತೆ ಇಲಾಖೆ ಜಾಗ ಅಳತೆ ಮಾಡಿ ನೀಡಿ ಮನೆ ನಿರ್ಮಿಸಲು ಫಲಾನುಭವಿಗಳಿಗೆ ಮೌಖಿಕವಾಗಿ ತಿಳಿಸಿದೆ ಆದರೆ ಈವರೆಗೂ ಹಕ್ಕು ಪತ್ರ ನೀಡಲಿಲ್ಲ ಎಂದು ಸಂತ್ರಸ್ತರಲ್ಲಿ ಓರ್ವರಾದ ಜಗನ್ನಾಥ ಹೇಳಿದರು.
ಅವರು ಎ.13 ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಂಕೀರ್ಣದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಸದ್ರಿ ಫಲಾನುಭವಿಗಳಿಗೆ ಸರಕಾರದಿಂದ ತಲಾ ರೂ 5 ಲಕ್ಷದಂತೆ ಅನುದಾನ ಮಂಜೂರಾಗಿ ಎಲ್ಲಾ ಮನೆಗಳು ಸಂಪೂರ್ಣಗೊಳ್ಳುವ ಹಂತದಲ್ಲಿದೆ.ಆದರೆ ಸದ್ರಿ ಜಾಗವನ್ನು ಡಿ.ಸಿ. ಮನ್ನಾ ಭೂಮಿ ಆಗಿದ್ದು ಕಂದಾಯ ಇಲಾಖೆಯಿಂದಲೇ ಹಕ್ಕು ಪತ್ರ ನೀಡಲಿಲ್ಲ.ಶೀಘ್ರ ಹಕ್ಕು ಪತ್ರ ನೀಡಬೇಕೆಂದು ಒತ್ತಾಯಿಸಿದರು.