ವೇಣೂರು: ನಾರಾಯಣ ಗುರುಗಳ ಜಯಂತಿ ಆಚರಣೆ ಸಂಘಟನೆ ಆಂತರಿಕ ಸಂಘರ್ಷಕ್ಕಲ್ಲ, ಸಮುದಾಯದ ಬಲವರ್ಧನೆಗೆ: ವಸಂತ ಬಂಗೇರ

0

ವೇಣೂರು: ಸಂಘಟನೆ ಆಂತರಿಕ ಸಂಘರ್ಷಕ್ಕಲ್ಲ.ಸಮುದಾಯದ ಬಲವರ್ಧನೆಗೆ ಸಂಘಟನೆ ಅಗತ್ಯವಾಗಿದೆ. ಬಿಲ್ಲವ ಸೇರಿದಂತೆ ಹಿಂದುಳಿದ ಸಮುದಾಯ ಇಂದು ತಲೆಎತ್ತಿ ನಡೆಯುವಂತಾಗಲು ನಾರಾಯಣ ಗುರುಗಳ ಕ್ರಾಂತಿಕಾರಿ ನಿಲುವುಗಳಿಂದ ಸಾಧ್ಯವಾಗಿದೆ.ವಿದ್ಯೆಯಿಂದ ಮಕ್ಕಳು ಬುದ್ದಿವಂತರಾಗಲು ಸಂಘಟನೆ ಶಕ್ತಿಯಾಗಲಿ ಎಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇ.ಸಂಘದ ಗೌರವಾಧ್ಯಕ್ಷ, ಮಾಜಿ ಶಾಸಕ ಕೆ.ವಸಂತ ಬಂಗೇರ ಹೇಳಿದರು.
ವೇಣೂರು ಶ್ರೀ ಗು.ನಾ.ಸ್ವಾ. ಸೇವಾ ಸಂಘ ಇದರ ಆಶ್ರಯದಲ್ಲಿ ಯುವವಾಹಿನಿ ಘಟಕದ ಸಹಯೋಗದಲ್ಲಿ ಶನಿವಾರ ಸಂಘದ ವಠಾರದಲ್ಲಿ ಜರಗಿದ ಬ್ರಹ್ಮಶ್ರೀ ನಾರಾಯಣ ಗುರುಗಳ ೧೬೮ನೇ ಜಯಂತಿ ಆಚರಣೆ, ಗುರಿಕಾರರಿಗೆ ಗೌರವಾರ್ಪಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.


ವೇಣೂರು ಶ್ರೀ ಗು.ನಾ.ಸ್ವಾ.ಸೇ. ಸಂಘದ ಅಧ್ಯಕ್ಷ ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.ನಾರಾಯಣ ಗುರುಗಳ ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಅವರು ಮಾತನಾಡಿ, ಎಲ್ಲರಿಗೂ ಸಮಾನವಾಗಿ ಬದುಕುವ ಅಧಿಕಾರಕ್ಕೆ ಹೋರಾಟ ಮಾಡಿದ ಮಹಾನ್ ಸಂತ ನಾರಾಯಣ ಗುರು.ಧಾರ್ಮಿಕ ಪ್ರಾತಿನಿತ್ಯ ಇಲ್ಲದ ಸಮುದಾಯಗಳಿಗೆ ಅವರೇ ದೇವರನ್ನು ಪೂಜಿಸಲು ಅವಕಾಶ ಮಾಡಿಕೊಟ್ಟರು.ಧರ್ಮ ನಿಷ್ಠ ಬಿಲ್ಲವರು, ರಾಷ್ಟ್ರವಾದಿ ಬಿಲ್ಲವರು ಅನ್ನುವ ಸಂಘಟನೆಗಳು ನಮ್ಮ ಮಧ್ಯೆ ಹುಟ್ಟಿ ಒಂದಷ್ಟು ಗೊಂದಲ ಉಂಟು ಮಾಡಿದೆ. ಬಿಲ್ಲವರು ಧರ್ಮದಿಂದ ಹೊರಗೆ ಇಲ್ಲ.ರಾಷ್ಟ್ರ, ಧರ್ಮದ ವಿರುದ್ಧ ಬಿಲ್ಲವ ಸಂಘಟನೆಗಳು ಯಾವತ್ತೂ ಧ್ವನಿ ಎತ್ತಿಲ್ಲ.೨೬ ನಾರಾ ಹೆಸರಿನಲ್ಲಿ ಬಿಲ್ಲವ ಸಮುದಾಯ ರಾಜ್ಯದಲ್ಲಿ ಹಿಂದೂ ಸಮಾಜದ ಒಳಗೆ ಗುರುತಿಸಿಕೊಂಡಿದೆ ಎಂದರು.
ಬೆಳ್ತಂಗಡಿ ಶ್ರೀ ಗು.ನಾ.ಸ್ವಾಮಿ ಸೇ. ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಏಲ್ದಕ್ಕ, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಬೆಳ್ತಂಗಡಿ ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ. ಸುವರ್ಣ, ಬೆಳ್ತಂಗಡಿ ಯುವ ಬಿಲ್ಲವ ವೇದಿಕೆ ಅಧ್ಯಕ್ಷ ನಿತೀಶ್ ಎಚ್., ವೇಣೂರು ಯುವವಾಹಿನಿ ಘಟಕದ ಅಧ್ಯಕ್ಷೆ ಹರಿಣಿ ಕರುಣಾಕರ್, ವೇಣೂರು ಗ್ರಾ.ಪಂ. ಉಪಾಧ್ಯಕ್ಷೆ ಪುಷ್ಪಾ ಡಿ., ವೇಣೂರು ಶ್ರೀ ಗು.ನಾ.ಸ್ವಾ.ಸೇ. ಸಂಘದ ಗೌರವಾಧ್ಯಕ್ಷ ಪೂವಪ್ಪ ಪೂಜಾರಿ ಪರನೀರು, ಕೋಶಾಧಿಕಾರಿ ಯೋಗೀಶ್ ಬಿಕ್ರೊಟ್ಟು, ಕೋಶಾಧಿಕಾರಿ ಸುಪ್ರಿತ್ ಬಂಗೇರ ಮರೋಡಿ ಉಪಸ್ಥಿತರಿದ್ದರು.ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ಭೇಟಿ ನೀಡಿದ್ದರು.
ಸಮ್ಮಾನ-ಪ್ರತಿಭಾ ಪುರಸ್ಕಾರ:
ಗುರಿಕಾರರುಗಳಾದ ಮಾರು ಶ್ರೀಧರ ಪೂಜಾರಿ, ಸೇಸಪ್ಪ ಪೂಜಾರಿ ಕೊಯಂದೂರು, ಸುಂದರ ಪೂಜಾರಿ ಕೊಯಂದೂರು, ಸದಾನಂದ ಪೂಜಾರಿ ಕುಂಜೋಡಿ, ಹರೀಶ್ಚಂದ್ರ ಪೂಜಾರಿ ಬಜಿರೆ, ವಿಜಯ ಪೂಜಾರಿ ಹೊಸಪಟ್ಣ, ದಿನೇಶ್ ಪೂಜಾರಿ ಪರದ್ಯಾರು, ರಾಜುಪೂಜಾರಿ ಬಾಡಾರು, ರಾಮಣ್ಣ ಪೂಜಾರಿ, ನಾರಾಯಣ ಪೂಜಾರಿ ಉಜಿರ್‍ದಡ್ಡ, ಪೂವಪ್ಪ ಪೂಜಾರಿ ಪರನೀರು, ಅರುಣ್ ಪೂಜಾರಿ ಜಾರಿಗೆದಡ್ಡ, ಶೀನ ಪೂಜಾರಿ ಬರ್ಕೆ, ಸುಕೇಶ್ ಪೂಜಾರಿ ಬರ್ಕೆ, ರವಿ ಪೂಜಾರಿ ಹುಲ್ಲೋಡಿ, ಶೇಖರ ಪೂಜಾರಿ ಕೊಳಂಗಜೆ ಅವರನ್ನು ಸಮ್ಮಾನಿಸಲಾಯಿತು.ಕೃಷ್ಣ ಪ್ರಸಾದ್, ಸಾಗರ ಕರಿಮಣೇಲು ಹಾಗೂ ಡಾ. ವೀಕ್ಷಿತಾ ಡಿ. ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಬೆಳ್ತಂಗಡಿ ಶ್ರೀ ಗು.ನಾ.ಸ್ವಾಮಿ ಸೇ. ಸಂಘದ ನಿರ್ದೇಶಕ ರಮೇಶ್ ಪೂಜಾರಿ ಪಡ್ಡಾಯಿಮಜಲು ಸ್ವಾಗತಿಸಿ, ಯುವವಾಹಿನಿ ಕಾಯದರ್ಶಿ ಸುಜೀತ್ ಪೂಜಾರಿ ಬಜಿರೆ ವಂದಿಸಿದರು. ಉಪನ್ಯಾಸಕಿ ಪ್ರಜ್ಞಾ ಪೂಜಾರಿ ಓಡಿಲ್ನಾಳ ನಿರೂಪಿಸಿದರು.ಸಮ್ಮಾನ ಪತ್ರವನ್ನು ಗು.ನಾ.ಸೇ. ಸ೦ಘದ ಜತೆ ಕಾರ್ಯದರ್ಶಿ ಸತೀಶ್ ಪೂಜಾರಿ ಉಜಿರ್ದಡ್ಡ ನಿರ್ವಹಿಸಿದರು.

p>

LEAVE A REPLY

Please enter your comment!
Please enter your name here