ಬೆಳ್ತಂಗಡಿ ವಿಧಾನಸಭಾ ಚುನಾವಣೆಗೆ ಆರಕ್ಷಕ ಪಡೆ ಸಜ್ಜು : ಅಲ್ಲಲ್ಲಿ ಪಥಸಂಚಲನ

0

ಬೆಳ್ತಂಗಡಿ :ಕರ್ನಾಟಕ ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟವಾದ ಬೆನ್ನಲ್ಲೇ ವಿಧಾನಸಭಾ ವ್ಯಾಪ್ತಿಯ ಪೊಲೀಸ್ ಇಲಾಖೆಯ ಬಲ ಪ್ರದರ್ಶನವು ಪಥಸಂಚಲನ ನಡೆಸುವ ಮೂಲಕ ಭರದಿಂದ ಸಾಗುತ್ತಿದೆ. ಬೆಳ್ತಂಗಡಿಯ 241 ಮತಗಟ್ಟೆಗಳಲ್ಲಿ ಸೂಕ್ಷ್ಮ ಮತ್ತು ನಕ್ಸಲೈಟ್ ಪ್ರದೇಶಗಳನ್ನು ಕೇಂದ್ರೀಕರಿಸಿ ಎ.6 ರಿಂದ ಎಂ.10 ರವರೆಗೆ ನಿರಂತರವಾಗಿ ಆರಕ್ಷಕ ಪಡೆ ಹಾಗೂ, ಕೇಂದ್ರೀಯ ಮೀಸಲು ಪೊಲೀಸ್ ಪಡೆ ಕನಿಷ್ಠ 5 ರಿಂದ 10 ಕಿಲೋಮೀಟರ್‌ಗಳ ವ್ಯಾಪ್ತಿಯಲ್ಲಿ ಪಥ ಸಂಚಲನವನ್ನು ನಡೆಸುತ್ತಿದೆ. ಮುಂದಿನ ದಿನಗಳಲ್ಲಿಯೂ ಸಂದರ್ಭಕ್ಕನುಗುಣವಾಗಿ ಸಾರ್ವಜನಿಕರಿಗೆ `ಧೈರ್ಯ ತುಂಬಲು ಪಥಸಂಚಲವನವು ನಡೆಯಲಿದೆ.

ಪಥ ಸಂಚಲನದ ಉದ್ದೇಶ:
ಚುನಾವಣೆಯ ಸಂದರ್ಭದಲ್ಲಿ ಅಥವಾ ಕೋಮುಗಲಭೆ ಆದ ಸಂದರ್ಭಗಳಲ್ಲಿ ಜನ ಸಾಮಾನ್ಯರ ಮನಸ್ಸಿನಲ್ಲಿರುವ ಭಯವನ್ನು ಹೋಗಲಾಡಿಸಲು ಹಾಗೂ ಪೊಲೀಸ್ ಇಲಾಖೆಯ ಸಾಮರ್ಥ್ಯ ಪ್ರದರ್ಶನಕ್ಕೆ ಪಥ ಸಂಚಲನವು ನಡೆಯುತ್ತದೆ.ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಹಾಗೂ ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಪರಿಸ್ಥಿತಿಯ ಸೂಕ್ಷ್ಮತೆಯನ್ನು ತಿಳಿದುಕೊಳ್ಳವುದರ ಜತೆಗೆ ಮತದಾರರು ನಿರ್ಭಯವಾಗಿ ಮತಗಟ್ಟೆಗೆ ಬಂದು ಮಕ್ತವಾಗಿ ಮತದಾನ ಮಾಡಲು ಪಥ ಸಂಚಲನ ಸಹಕರಿಸುತ್ತದೆ.
ಹೋಬಳಿ, ನಗರ, ಪಟ್ಟಣ, ಜನನಿಭಿಡ ಪ್ರದೇಶಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ನಡೆಸಲ್ಪಡುತ್ತದೆ.ಸಮವಸ್ತ ತೊಟ್ಟು ಶಿಸ್ತಿನಿಂದ ಕನಿಷ್ಟ ೫೦ ಮಂದಿ ಸಿಬ್ಬಂದಿಗಳನ್ನೊಳಗೊಂಡ ಒಂದು ಪಥಸಂಚಲನ ನಡೆಯುವಾಗ ಮತದಾರರು ಧೈರ್ಯವಾಗಿ ಮತಗಟ್ಟೆಗೆ ಬಂದು ಮತದಾನ ಮಾಡಲು ಇದು ಪ್ರೇರೀಪಿಸುತ್ತದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಸೂಚನೆಯ ಮೇರೆಗೆ ಡಿವೈಎಸ್ಪಿ, ಎಸ್‌ಪಿ, ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಪಥ ಸಂಚಲನವು ನಡೆಯುತ್ತದೆ.ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಧರ್ಮಸ್ಥಳ, ಬೆಳ್ತಂಗಡಿ, ವೇಣೂರು, ಪುಂಜಾಲಕಟ್ಟೆ, ಉಪ್ಪಿನಂಗಡಿ ಆರಕ್ಷಕ ಠಾಣೆ ಸೇರಲ್ಪಟ್ಟಿದ್ದು.ಚುನಾವಣಾ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಈ ಪಥಸಂಚಲನವು ಸಹಾಯ ಮಾಡುತ್ತದೆ.

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ 20 ಗ್ರಾಮಗಳನ್ನು ನಕ್ಸಲ್ ಪೀಡಿತ ಗ್ರಾಮವೆಂದು ಹಾಗೂ ಶಿಬಾಜೆ ಗ್ರಾಮವನ್ನು ವಲ್ಲರೇಬಲ್ ಗ್ರಾಮ ಎಂದು ಗುರುತಿಸಲಾಗಿದೆ.ಈ ಪ್ರದೇಶದಲ್ಲಿ ಸಾರ್ವಜನಿಕರು ನಿರ್ಭಯವಾಗಿ ಮತಗಟ್ಟೆಗೆ ಬಂದು ಮತದಾನ ಮಾಡಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಆರಕ್ಷಕ ಪಡೆ ತಾಲೀಮು ನಡೆಸಿದೆ. ಜೊತೆಗೆ ಈ ಪ್ರದೇಶಗಳ ಜನಸಾಮಾನ್ಯರ ಜೊತೆಗೆ ಸಣ್ಣಮಟ್ಟಿನ ಸಮಾಲೋಚನೆಯನ್ನು ಕೂಡ ನಡೆಸಿದೆ. ಮುಂದಿನ ದಿನಗಳಲ್ಲಿ ಚುನಾವಣಾ ಕರ್ತವ್ಯಕ್ಕಾಗಿ ಈ ಪ್ರದೇಶದಲ್ಲಿ ಆರಕ್ಷಕ ಇಲಾಖೆಯ ಓರ್ವ ಹೆಡ್ ಕಾನ್ಸ್ಟೇಬಲ್ ನಿಯೋಜನೆಗೊಳ್ಳುತ್ತಾರೆ. ಮೇ 10 ರಂದು ಮತದಾನ ನಡೆಯಲಿರುವ ಕಾರಣ ಮೇ.8ರವರೆಗೂ ಅಲ್ಲಲ್ಲಿ ಪಥ ಸಂಚಲನವು ನಡೆಯಲಿದೆ.ಜನ ಸಾಮಾನ್ಯರ ಗಮನಕ್ಕೆ ಯಾವುದೇ ಅಹಿತಕರ ಸನ್ನಿವೇಶಗಳು ಕಂಡುಬಂದಲ್ಲಿ ತಕ್ಷಣ ಪೊಲೀಸ್ ಸಹಾಯವಾಣಿ 112 ನಂಬರ್‌ಗೆ ಕರೆ ಮಾಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here