ಬೆಳ್ತಂಗಡಿ: ಅಬಕಾರಿ ಜಂಟಿ ಆಯುಕ್ತರು ಹಾಗೂ ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ಮತ್ತು ಅಬಕಾರಿ ಉಪ ಅಧೀಕ್ಷಕರ ನಿರ್ದೇಶನದಲ್ಲಿ ಸಾರ್ವತ್ರಿಕ ವಿಧಾನಸಭಾ ಚುನಾವಣೆ-೨೦೨೩ರ ಸಂಬಂಧ ಯಾವುದೇ ಅಬಕಾರಿ ಅಕ್ರಮ ಚಟುವಟಿಕೆಗಳು ನಡೆಯದಂತೆ ಗಸ್ತು ನಡೆಸುತ್ತಿದ್ದಾಗ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ನೀರಚೆಲುಮೆ ಎಂಬಲ್ಲಿ ಧರ್ಮಸ್ಥಳದ ಶಶಿಧರ್ ಎಂಬಾತ ಅಕ್ರಮವಾಗಿ ಮಾರಟದ ಉದ್ದೇಶಕ್ಕಾಗಿ Maruti Omni(KA19-M-5493)ಯಲ್ಲಿ ಅಕ್ರಮವಾಗಿ ಒಟ್ಟು ೮.೬೪೦ ಲೀಟರ್ ಮದ್ಯವನ್ನು ಹೊಂದಿ ಸಾಗಾಟ ಮಾಡಿರುವುದನ್ನು ಪತ್ತೆಹಚ್ಚಿದ್ದು, ಪರಾರಿಯಾದ ಅರೋಪಿಯ ವಿರುದ್ದ ಮೊಕದ್ದಮೆ ದಾಖಲಿಸಗಾಗಿದೆ.ವಾಹನ ಹಾಗೂ ಮದ್ಯವನ್ನು ಸರ್ಕಾರದ ವಶಕ್ಕೆ ಪಡೆ೦ಲಾಗಿದೆ. ವಾಹನ ಹಾಗೂ ಸೊತ್ತಿನ ಒಟ್ಟು ಮೌಲ್ಯ ಸುಮಾರು ೧,೫೩,೩೬೦/- ಎಂದು ಅಂದಾಜಿಸಲಾಗಿದೆ.
ಕಾರ್ಯಚರಣೆಯಲ್ಲಿ ಅಬಕಾರಿ ನಿರೀಕ್ಷಕ ಶ್ರೀ ನವೀನ್ ಕುಮಾರ್, ಅಬಕಾರಿ ಕಾನ್ಸ್ ಟೇಬಲ್ಗಳಾದ ಬೋಜ ಕೆ, ಶ್ರೀ ವಿನೋಯ್ ಸಿ,ಜಿ ಮತ್ತು ವಾಹನ ಚಾಲಕ ನವೀನ್ ಕುಮಾರ್ ಪಿ. ಭಾಗವಹಿಸಿದ್ದರು.
p>