ಹೋಲಿ ರಿಡೀಮರ್ ಶಾಲೆಯಲ್ಲಿ ಕ್ರೀಡಾ ಶಿಬಿರದ ಸಮಾರೋಪ ಸಮಾರಂಭ

0

ಬೆಳ್ತಂಗಡಿ: ಹೋಲಿ ರಿಡೀಮರ್ ಶಾಲೆಯಲ್ಲಿ ಎಪ್ರಿಲ್ 8 ರಂದು 5 ದಿನಗಳ ಕಾಲ ನಡೆದ ಕ್ರೀಡಾ ಶಿಬಿರದ ಸಮಾರೋಪ ಸಮಾರಂಭವನ್ನು ಏರ್ಪಡಿಸಲಾಯಿತು.

ಶಾಲಾ ಮುಖ್ಯೋಪಾಧ್ಯಾಯರಾದ ವಂ ಫಾ ಕ್ಲಿಫರ್ಡ್ ಪಿಂಟೋರವರು ಶಿಬಿರದಲ್ಲಿ ಉತ್ಸಾಹದಿಂದ ಭಾಗವಹಿಸಿದ 170 ವಿದ್ಯಾರ್ಥಿಗಳನ್ನು ಮತ್ತು ತರಬೇತುದಾರರನ್ನು ಅಭಿನಂದಿಸಿದರು.

ತರಬೇತುದಾರರಾದ ಶ್ರೀ ಕೃಷ್ಣಾನಂದ, ಶ್ರೀ ಸುಗನ್, ಶ್ರೀ ನಾಗರಾಜ್, ಶ್ರೀ ವಿಲ್ಸನ್, ಶ್ರೀ ರಾಜೇಶ್, ಶ್ರೀ ಹರ್ಷ ಕುಮಾರ್, ಶ್ರೀ ರಶೀದ್, ಶ್ರೀ ಚಿರಾಗ್, ಶ್ರೀ ಪ್ರಣಯ್ ಹಾಗೂ ಶ್ರೀ ದೇವರಾಜ್ ರವರು ಕಬಡ್ಡಿ, ಹ್ಯಾಂಡ್ ಬಾಲ್, ತ್ರೋಬಾಲ್, ವಾಲಿಬಾಲ್, ಬಾಲ್ ಬ್ಯಾಡ್ಮಿಂಟನ್ ಆಟಗಳ ನಿಯಮಗಳ ಜೊತೆಗೆ ಮೂಲ ಕೌಶಲ್ಯಗಳನ್ನು ಕಲಿಸಿ ವಿದ್ಯಾರ್ಥಿಗಳಲ್ಲಿ ಆಸಕ್ತಿ, ಆತ್ಮವಿಶ್ವಾಸ ಮತ್ತು ಕ್ರೀಡಾ ಮನೋಭಾವವನ್ನು ಮೂಡಿಸಿದರು.

ವಿದ್ಯಾರ್ಥಿಗಳಾದ ವಿನೀಶಾ, ಲೆವಿನ್, ವಿಯೋಲ, ನಿಜ ಹಾಗೂ ಪ್ರಣವ್ ಶಿಬಿರದ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಶಿಬಿರದಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಶರತ್ ಸಂತೋಷ್ ಪಿಂಟೋ ಸಹಕರಿಸಿದರು.

p>

LEAVE A REPLY

Please enter your comment!
Please enter your name here