





ಕಳಿಯ : ಕಳಿಯ ಗ್ರಾಮದ ಎರುಕಡಪ್ಪು ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಪಕ್ವಾಡ ಕಾರ್ಯಕ್ರಮದಡಿ ಸಿರಿ ಧಾನ್ಯಗಳ ಮಾಹಿತಿ ಕಾರ್ಯಕ್ರಮ ಮತ್ತು ಮಕ್ಕಳನ್ನು ಕಿರಿಯ ಪ್ರಾಥಮಿಕ ಶಾಲೆಗೆ ಬೀಳ್ಕೋಡುಗೆ ಕಾರ್ಯಕ್ರಮ ಎ.1 ರಂದು ನಡೆಯಿತು.
ಈ ಸಂದರ್ಭದಲ್ಲಿ ಬಾಲವಿಕಾಶ ಸಮಿತಿ ಅಧ್ಯಕ್ಷೆ ಶ್ರೀಮತಿ ಭಾರತಿ ಬಿ. ಗೌಡ,ಮಂಗಳೂರು ನಿವೃತ್ತ ಪೋಸ್ಟ್ ಮಾಸ್ಟರ್ ಕೂಸಪ್ಪ ಗೌಡ ಹೀರ್ಯ, ಬೊಳ್ಳುಕಲ್ಲು ಕಿರಿಯ ಪ್ರಾಥಮಿಕ ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಹಸನಬ್ಬ,ಸ್ಥಳೀಯರಾದ ಅಬುಬಕ್ಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಂಗನವಾಡಿ ಕೇಂದ್ರದಿಂದ ಕಿರಿಯ ಪ್ರಾಥಮಿಕ ಶಾಲೆಗೆ ಬೀಳ್ಕೋಡುಗೆ ಯಾದ ಸಾನ್ವಿ ವತಿಯಿಂದ 18 ಪುಸ್ತಕ ಮತ್ತು ಪೆನ್ಸಿಲ್ ನೀಡಿದರು.


ಪೆರಾಜೆ ಅಬಿಲಾಷ್ ವತಿಯಿಂದ ಮಹಾತ್ಮಾ ಗಾಂಧೀಜಿ ಯವರು ಭಾವಚಿತ್ರವನ್ನು ನೀಡುವುದಾಗಿ ಘೋಷಿಸಿದರು.
ಮಕ್ಕಳ ಪೋಷಕರು ಬಾಲವಿಕಾಸ ಸಮಿತಿ ಸದಸ್ಯರು, ಸಹಾಯಕಿ ಗೀತಾ ಭಾಗವಹಿಸಿದರು. ಅಂಗನವಾಡಿ ಕಾರ್ಯಕರ್ತೆ ಗುಣವತಿ ಕೆ.ಎನ್ ಸ್ವಾಗತಿಸಿ,ಧನ್ಯವಾದವಿತ್ತರು.








