ಮೇಲಂತಬೆಟ್ಟು : ಶ್ರೀ ದೇವಿ ಭಗವತಿ ಅಮ್ಮನವರ ದೇವಸ್ಥಾನದ ಶ್ರೀ ದೇವಿ ಭಗವತಿ ಅಮ್ಮನವರ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಎ.3 ರಿಂದ 7 ರ ವರೆಗೆ ಬ್ರಹ್ಮಶ್ರೀ ನಡ್ವಂತಾಡಿ ವೇ. ಮೂ. ಶ್ರೀ ಪಾದ ಪಾಂಗಣ್ಣಾಯರವರ ನೇತೃತ್ವದಲ್ಲಿ ನಡೆಯಲಿದ್ದು, ಎ.3 ರಂದು ಸಂಜೆ ತಂತ್ರಿಗಳಿಗೆ ಸ್ವಾಗತ, ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಜಗದೀಶ್ ಪಡಿವಾಳ್ ಪಾಕಶಾಲೆ ಉದ್ಘಾಟಿಸಿದರು.
ಎ.4 ರಂದು ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಯನ್ನು ಲಾಯಿಲ ವೆಂಕಟರಮಣದೇವಸ್ಥಾನದ ಅಧ್ಯಕ್ಷ ಡಾ. ಸುಧೀರ್ ಪ್ರಭು ಉದ್ಘಾಟಿಸಿದರು. ಮಾಣಿಲ ಧಾಮದ ಶ್ರೀ ಮೋಹನ್ ದಾಸ ಸ್ವಾಮೀಜಿ ಬಳಿಕ ವಿವಿಧ ನೃತ್ಯ ಭಜನಾ ತಂಡದೊಂದಿಗೆ ಮೆರವಣಿಗೆ ಮೂಲಕ ಭಕ್ತರು ಹೊರೆಕಾಣಿಕೆ ದೇವಸ್ಥಾನಕ್ಕೆ ಸಮಾರ್ಪಿಸಿದರು. ಸೇವಾಕರ್ತ ದಿನೇಶ್ ಪೂಜಾರಿ ಬೆಳ್ತಂಗಡಿ ಉಗ್ರಾಣವನ್ನು, ನಿವೃತ್ತ ಕೃಷಿ ಅಧಿಕಾರಿ ನಾರಾಯಣ ಸುವರ್ಣ ಬೆಳಾಲು ಕಾರ್ಯಾಲಯವನ್ನು ಉದ್ಘಾಟಿಸಿದರು.
ಧರ್ಮದರ್ಶಿ ಯೋಗೀಶ್ ಪೂಜಾರಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಡಾ. ಎಂ. ಎಂ. ದಯಾಕರ ಭಟ್, ಪ್ರಧಾನ ಕಾರ್ಯದರ್ಶಿ ರಾಜೀವ್ ಸಾಲಿಯಾನ್ ಮುಂಡೂರು, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಜಯಾನಂದ ಲಾಯಿಲ, ಕೋಶಾಧಿಕಾರಿ ಪ್ರಶಾಂತ್ ಕುದ್ಯಾಡಿ, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಸುರೇಶ ಶೆಟ್ಟಿ ಮಾಪಲಾಡಿ, ಕಾರ್ಯಾಧ್ಯಕ್ಷ ನಾರಾಯಣ ಪೂಜಾರಿ, ಪೂಜಾ ಸಮಿತಿ ಅಧ್ಯಕ್ಷ ರಮೇಶ್ ಪೂಜಾರಿ ಅಂಕಜೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಯಶವಂತ, ಒಕ್ಕೂಟದ ಪದಾಧಿಕಾರಿಗಳು ಸದಸ್ಯರು ವಿವಿಧ ಉಪ ಸಮಿತಿಗಳ ಸಂಚಾಲಕರು ಸದಸ್ಯರು, ಭಜನಾ ತಂಡಗಳು, ಊರ ಪರಊರ ಭಕ್ತರು ಉಪಸ್ಥಿತರಿದ್ದರು.